ಮಧ್ಯಂತರ ಚುನಾವಣೆಯ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದೇನು..?

28 Oct 2019 11:06 AM | Politics
587 Report

ಮೈತ್ರಿ ಸರ್ಕಾರವು ಪತನವಾಗಲು ಬಿಜೆಪಿ ಸರ್ಕಾರ ಮಾಡಿದ ಆಪರೇಷನ್ ಕಮಲವೇ ಕಾರಣ ಎಂಬುದು ಗೊತ್ತಿರುವ ವಿಷಯವೇ..ಅತೃಪ್ತ ಶಾಸಕರು ದೋಸ್ತಿ ಕೈಕೊಟ್ಟ ಮೇಲೆ ಸದ್ಯ ಅನರ್ಹ ಶಾಸಕರಾಗಿದ್ದಾರೆ.…ಬಿಜೆಪಿ ಆಪರೇಷನ್ ಕಮಲ ಮಾಡಿ ಮೈತ್ರಿ ಸರ್ಕಾರ ಪತನಗೊಳಿಸಿದಂತೆ ಆಡಳಿತಾ ರೂಢ ಬಿಜೆಪಿ ಸರ್ಕಾರವನ್ನು ಪತನಗೊಳಿಸಲು ಜೆಡಿಎಸ್ ಪ್ರಯತ್ನಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ…

ಅಷ್ಟೆ ಅಲ್ಲದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಿಜೆಪಿ ಸರ್ಕಾರವನ್ನು ಪತನಗೊಳಿಸಲು ನಾವು ಯಾವತ್ತು ಕೈ ಹಾಕುವುದಿಲ್ಲ.. , ಮಧ್ಯಂತರ ಚುನಾವಣೆ ಬಗ್ಗೆ ಚಿಂತಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇತರ ಪಕ್ಷಗಳ ನಾಯಕರು ಅಧಿಕಾರಕ್ಕಾಗಿ  ಆಸೆ ಪಡಬಹುದು ಆದರೆ, ನಾವು ಹಾಗಲ್ಲ, ಪರಿಣಾಮಕಾರಿ ಪ್ರತಿಪಕ್ಷವಾಗಿ ಕೆಲಸ ಮಾಡುತ್ತೇವೆ. ಆ ಬಗ್ಗೆ ತಮ್ಮಗೆ ವಿಶ್ವಾಸವಿದೆ ಎಂದು ಮಾದ್ಯಮವರಿಗೆ ತಿಳಿಸಿದರು.. ಒಟ್ಟಾರೆಯಾಗಿ ಮೈತ್ರಿ ಸರ್ಕಾರ ಪತನವಾದ ಮೇಲೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ಕೂಡ ಇನ್ನೂ ಯಾವುದೇ ರೀತಿಯ ಬದಲಾವಣೆಯಾಗಿಲ್ಲ ಎಂಬುದು ವಿರೋಧಪಕ್ಷದವರ ಮಾತಾಗಿದೆ.

 

Edited By

Manjula M

Reported By

Manjula M

Comments