ತಿಹಾರ್ ಜೈಲಿನಿಂದ ಹೊರಬಂದ ಡಿಕೆಶಿ ಹೇಳಿದ್ದೇನು ಗೊತ್ತಾ..?

24 Oct 2019 10:16 AM | Politics
407 Report

ಅಕ್ರಮ ಹಣ ಸಿಕ್ಕ ಹಿನ್ನಲೆಯಲ್ಲಿ ಜೈಲು ಪಾಲಾಗಿದ್ದ ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರಿಗೆ 48 ದಿನಗಳ ಬಳಿಕ ಬೇಲ್ ಸಿಕ್ಕಿದೆ..  ಸದ್ಯ ದೆಹಲಿ ಹೈಕೋರ್ಟ್ ಡಿ.ಕೆ. ಶಿವಕುಮಾರ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಿದ್ದು, 9-30 ರ ಸುಮಾರಿಗೆ ಡಿಕೆಶಿ ಹೊರ ಬಂದಿದ್ದಾರೆ. ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿ ತಿಹಾರ್ ಜೈಲಿನಿಂದ ಹೊರಬಂದ ಡಿ.ಕೆ. ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದರು..

ಡಿ ಕೆ ಶಿವಕುಮಾರ್ ಮಾಧ್ಯಮಗಳ ಜೊತೆ  ಮಾತನಾಡುತ್ತಾ ನನಗಾಗಿ ರಸ್ತೆಗಿಳಿದು ಹೋರಾಟ ಮಾಡಿದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ನಾಯಕರಿಗೆ ಕೃತಜ್ಞತೆಗಳು. ಅವರೆಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ..ತದ ನಂತರ ಡಿ.ಕೆ. ಸುರೇಶ್ ಅವರ ಜೊತೆ ದೆಹಲಿಯ ಮಲ್ಚಾ ಮಾರ್ಗದಲ್ಲಿರುವ ಶಿವನ ದೇವಾಲಯಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಾತ್ರಿ ಸಹೋದರನ ಮನೆಯಲ್ಲಿ ವಾಸ್ತವ್ಯ ಹೂಡಿರುವ ಡಿ.ಕೆ. ಶಿವಕುಮಾರ್, ಇಂದು ಬೆಳಿಗ್ಗೆ ತಮ್ಮ ಪರ ವಾದ ಮಾಡಿದ ವಕೀಲರನ್ನು ಭೇಟಿಯಾಗಿ ಬಳಿಕ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಕನಕಪುರದಲ್ಲಿ ಸಂತೋಷ ಸಂಭ್ರಮ ಮುಗಿಲು ಮುಟ್ಟಿದೆ… ಸದ್ಯ ಡಿಕೆಶಿ ಆಗಮನಕ್ಕಾಗಿ ಕಾಯುತ್ತಿರುವ ಕನಕಪುರದ ಜನತೆ ಕಾಯುತ್ತಿದ್ದಾರೆ.. ಇಲ್ಲಿಗೆ ಡಿಕೆಶಿ ನಿರಾಳ ಆದ್ರ ಅಥವಾ ಮುಂದೆ ಮತ್ತೊಂದು ರೀತಿಯ ಸಂಕಷ್ಟ ಎದುರಾಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments