ರಮೇಶ್ ಜಾರಕಿಹೊಳಿ ಬಿಜೆಪಿ ಸೇರಲು ಕಾರಣ ಏನ್ ಗೊತ್ತಾ..?

18 Oct 2019 11:38 AM | Politics
493 Report

ರಾಜ್ಯ ರಾಜಕೀಯದಲ್ಲಿ ಪಕ್ಷದಿಂದ ಪಕ್ಷಕ್ಕೆ ಹಾರುವವರ ಸಂಖ್ಯೆ ಏನು ಕಡಿಮೆ ಇಲ್ಲ..ಅವರವರ ಮನಸ್ಸಿಗೆ ಬಂದಂತೆ ಪಕ್ಷವನ್ನು ಬದಲಿಸುತ್ತಿರುತ್ತಾರೆ.. ಸದ್ಯ ರಮೇಶ್ ಜಾರಕಿಹೋಳಿ ಬಿಜೆಪಿ ಗೆ ಹೋಗಿರುವುದು ಎಲ್ಲರಿಗೂ ಕೂಡ ತಿಳಿದಿರುವ ವಿಷಯವೇ… ಆದರೆ ಇದೀಗ ಸಹೋದರನ ವಿರುದ್ದವೇ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ ಬಿಜೆಪಿ ಪಕ್ಷವನ್ನು ಬೆಳೆಸಲು ಹೋಗಿಲ್ಲ ಎಂದಿದ್ದಾರೆ.

ಸಾಲ ಮಾಡಿಕೊಂಡಿದ್ದರಿಂದ ಅದನ್ನು ತೀರಿಸಿಕೊಳ್ಳಲು ಅಲ್ಲಿಗೆ ಹೋಗಿದ್ದಾನೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಸಹೋದರನ ವಿರುದ್ಧ ಮಾತನಾಡಿದ್ದಾರೆ.. ರಮೇಶ್ ಜಾರಕಿಹೊಳಿ ಸಾಲ ತೀರಿಸಿಕೊಳ್ಳಲು ಬಿಜೆಪಿಗೆ ಬಂದಿದ್ದಾನೆಂಬುದು ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿಯವರಿಗೆ ಗೊತ್ತಾಬೇಕು. ಇವನನ್ನು ಅವರು ನಂಬಿರಬಹುದು. ಆದರೆ, ರಮೇಶ್ ಜಾರಕಿಹೊಳಿ ಸ್ವಾರ್ಥಕ್ಕಾಗಿ ಬಿಜೆಪಿ ಸೇರಿದ್ದಾನೆ ಎಂದು ಕಿಡಿಕಾರಿದ್ದಾರೆ. ರಾಜಕೀಯದಲ್ಲಿ ಸಂಬಂಧಗಳೇ ಮುರಿದುಕೊಳ್ಳುತ್ತವೆ ಎಂಬುದಕ್ಕೆ ಇವರು ಉದಾಹರಣೆ ಎನ್ನಬಹುದು…

Edited By

Manjula M

Reported By

Manjula M

Comments