ಮಂಡ್ಯ ಸಂಸದೆ ಸುಮಲತಾಗೆ ತಿರುಗೇಟು ಕೊಟ್ಟ ಜೆಡಿಎಸ್ ಶಾಸಕ..!!

16 Oct 2019 1:20 PM | Politics
450 Report

ಮಂಡ್ಯ ಲೋಕಸಭಾ ಚುನಾವಣೆಯ ಅಖಾಡದಲ್ಲಿ ಗೆದ್ದ ಸುಮಲತಾ ಸ್ವಾಭಿಮಾನಿ ಸುಮಲತಾ ಎಂದೇ ಹೆಸರು ಪಡೆದುಕೊಂಡಿದ್ದರು. ಆದರೆ ಇದೀಗ ಅವರ ಮೇಲೆ ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಿವೆ..ಇದೀಗ ಜೆಡಿಎಸ್ ನ ಶಾಸಕ ಅನ್ನದಾನಿ ಮಂಡ್ಯ ಸಂಸದೆ ಸುಮಲತಾ ಅವರಿಗೆ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ..

ಮಳವಳ್ಳಿಯಲ್ಲಿ ಸಂಸದೆ ಸುಮಲತಾ ಅವರೇ ಪ್ರತಿದಿನ ಇಲ್ಲಿನ ಜನರ ಕಷ್ಟ ಸುಖವನ್ನು ನೋಡ್ತಾ ಇದ್ದಾರೆ, ನಾನು ಏನೂ ಕೆಲಸ ಮಾಡ್ತಾ ಇಲ್ಲ, ಬಿಳಿ ಪಂಚೆ, ಶರ್ಟ್ ಹಾಕಿಕೊಂಡು ಓಡಾಡುತ್ತಿದ್ದೇನೆ ಎಂದು ಸುಮಲತಾ ಅಂಬರೀಶ್ ಗೆ ಜೆಡಿಎಸ್ ಶಾಸಕ ಅನ್ನದಾನಿ ವ್ಯಂಗ್ಯವಾಗಿ ತಿರುಗೇಟು ಕೊಟ್ಟಿದ್ದಾರೆ.  ಸುಮಲತಾ ಅಂಬರೀಶ್ ಅವರು ತಾಲೂಕು ಆಫೀಸ್, ಪೊಲೀಸ್ ಠಾಣೆ, ಎಲ್ಲವನ್ನೂ ಅವರೇ ಮಾಡುತ್ತಿದ್ದಾರೆ. ಕೆರೆಗೆ ಪೂಜೆ, ಕೆರೆ ತುಂಬಿಸಿದ್ದು, ಅಲ್ಲದೇ ಪಿಂಚಣಿ ಕೂಡ ಮೇಡಂ ಅವರೇ ಕೊಡಿಸುತ್ತಿರುವುದು ಅವರೇ, ಜಗಳಗಳನ್ನು ಇತ್ಯರ್ಥ ಮಾಡುತ್ತಾ ಇರೋದು, ಈ ತಾಲೂಕಿನ ಕೆಲಸವನ್ನೆಲ್ಲಾ ಅವರೇ ಮಾಡುತ್ತಾ ಇರೋದು ಎಂದು ಟಾಂಗ್ ಕೊಟ್ಟಿದ್ದಾರೆ. ಆದರೆ ಗೆದ್ದ ಮೇಲೆ ಸುಮಲತಾ ಅದ್ಯಾಕೋ ಮಂಡ್ಯ ಜನತೆಯ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ನಾವೆಲ್ಲಾ ತಿರುಗಾಡಿಕೊಂಡು ಸುಮ್ಮನೆ ಇದ್ದೀವಿ… ಸುಮಲತಾ ಅವರೇ ಎಲ್ಲಾ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಗಿ ತಿರುಗೇಟು ಕೊಟ್ಟಿದ್ದಾರೆ.

Edited By

Manjula M

Reported By

Manjula M

Comments