ಜೆಡಿಎಸ್ ನ ಮತ್ತೊಂದು ಪ್ರಭಾವಿ ವಿಕೇಟ್ ಪತನ…!!!
ದೋಸ್ತಿ ಸರ್ಕಾರ ಪತನವಾದ ಮೇಲೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸುತ್ತಿವೆ… ಸದ್ಯ ದೋಸ್ತಿ ಸರ್ಕಾರ ಕ್ಕೆ ಕೈ ಕೊಟ್ಟ ಶಾಸಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಇದೀಗ ಮತ್ತೊಂದು ಜೆಡಿಎಸ್ ನ ವಿಕೆಟ್ ಪತನಗೊಂಡಿದೆ. ಉಪಚುನಾವಣೆಯ ಹೊತ್ತಿನಲ್ಲಿಯೇ ಜೆಡಿಎಸ್ ಗೆ ಮತ್ತೊಂದು ಬಿಗ್ ಶಾಕ್ ಎದಿದ್ದೆ. ಇದೀಗ ಶಾಸಕ ಸ್ಥಾನಕ್ಕೆ ಸಾ.ರಾ. ಮಹೇಶ್ ರಾಜೀನಾಮೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಜೆಡಿಎಸ್ ಶಾಸಕ ಸಾ.ರಾ.ಮಹೇಶ್, ಸೆ. 18 ರಂದೇ ರಾಜೀನಾಮೆ ಸಲ್ಲಿಸಿದ್ದೇನೆ. ಮಾನಸಿಕವಾಗಿ ನೊಂದು ರಾಜೀನಾಮೆ ನೀಡಿದ್ದೇನೆ ಅಷ್ಟೆ ಅಲ್ಲದೆ ಸ್ಪೀಕರ್ ಇಲ್ಲದ ಕಾರಣ ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಕೊಟ್ಟಿದ್ದೆ. ನಂತರ ಸ್ಪೀಕರ್ ಮನವೊಲಿಸಿದರೂ ಕೂಡ ನಾನು ರಾಜೀನಾಮೆ ವಾಪಸ್ ಪಡೆದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ರಾಜೀನಾಮೆ ನೀಡಿರುವ ಕುರಿತು ಸಾರಾ ಮಹೇಶ್ ಬಹಿರಂಗವಾಗಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ಉಪಚುನಾವಣೆಯ ಹೊತ್ತಿನಲ್ಲಿ ಹೀಗೆ ಆಗಿರುವುದು ಜೆಡಿಎಸ್ ನ ಮೇಲೆ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ.
Comments