ಡಿಕೆಶಿ ಪುತ್ರಿ ಐಶ್ವರ್ಯಗೂ ಸಮನ್ಸ್ ಜಾರಿ..!!!
ಕೆಲ ದಿನಗಳಿಂದ ಇಡಿ ಬಂಧನದಲ್ಲಿರುವ ಡಿಕೆಶಿ ವಿಷಯ ರಾಜ್ಯ ರಾಜಕಾರಣದಲ್ಲಿ ಸಖತ್ ಸದ್ದು ಮಾಡುತ್ತಿದೆ.. ಸದ್ಯ ಇಡಿ ಬಂಧನದಲ್ಲಿರುವ ಡಿಕೆಶಿಗೆ ಮತ್ತೊಂದು ಶಾಕ್ ಆಗಿದೆ.. ಇದೀಗ ಡಿಕೆಶಿ ಪುತ್ರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ.. ಸೆ.12 ವಿಚಾರಣೆಗೆ ಬರುವಂತೆ ಇಡಿಯಿಂದ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ... 2017ರ ನವೆಂಬರ್ ತಿಂಗಳಿನಲ್ಲಿ ಶಿವಕುಮಾರ್ ತಾಯಿ ಗೌರಮ್ಮ, ಪತ್ನಿ ಉಷಾ, ಪುತ್ರಿ ಐಶ್ವರ್ಯ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಕಚೇರಿಯಲ್ಲಿ ಪ್ರತ್ಯೇಕವಾಗಿ ವಿಚಾರಣೆಗೆ ಹಾಜರಾಗಿ ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡಿದ್ದರು..
ಆದರೆ ಇದೀಗ ಮತ್ತೆ ಡಿ.ಕೆ ಶಿವಕುಮಾರ್ ಪುತ್ರಿ ಐಶ್ವರ್ಯ ವಿಚಾರಣೆಗೆ ಬರುವಂತೆ ಇಡಿ ತಿಳಿಸಿದೆ ಎನ್ನಲಾಗಿದೆ. ಈ ಹಿಂದೆಯೂ ಕೂಡ ಐಟಿ ವಿಚಾರಣೆ ವೇಳೆಯಲ್ಲಿ ನನ್ನ ಮಗಳು ಐಶ್ವರ್ಯ ಸ್ವತಂತ್ರವಾಗಿ ವ್ಯಾಪಾರ ಮಾಡುವ ಉದ್ದೇಶದಿಂದ ಸೋಲ್ ಸ್ಪೇಸ್ ಅರೇನಾದಲ್ಲಿ ಶೇ.50ರಷ್ಟು ಷೇರು ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದಾಳೆ. ಇದೇ ಕಾರಣಕ್ಕಾಗಿಯೇ ರಿಯಲ್ ಎಸ್ಟೇಟ್ ಪ್ರಾಪರ್ಟಿಗಳಲ್ಲಿ ಷೇರನ್ನು ಖರೀದಿಸಿ ಪ್ರತ್ಯೇಕವಾಗಿ ರಿಯಲ್ ಎಸ್ಟೇಟ್ ಬಿಸಿನೆಸ್ ಆರಂಭಿಸಿದ್ದಾಳೆ. ಅದಕ್ಕೆ ಐಟಿ ರಿಟರ್ನ್ ಸಲ್ಲಿಸುತ್ತಿದ್ದಾಳೆ,' ಎಂದು ಡಿ.ಕೆ ಶಿವಕುಮಾರ್ ಐಟಿ ಅಧಿಕಾರಿಗಳಿಗೆ ವಿವರಣೆ ನೀಡಿದ್ದರು. ಆದರೆ, ಮಗಳು ಕೋಟ್ಯಂತರ ರೂ. ಸಾಲ ಪಡೆದಿರುವುದಕ್ಕೆ ಪ್ರತಿಯಾಗಿ ಭದ್ರತೆ ರೂಪದಲ್ಲಿ ನೀಡಿರುವ ಸ್ವತ್ತು ಅಥವಾ ಗ್ಯಾರಂಟಿ ಕುರಿತು ಮಾಹಿತಿ ನೀಡಿಲ್ಲ ಹೀಗಾಗಿ ಈಗ ಇಡಿ ವಿಚಾರಣೆಗೆ ಬರುವಂತೆ ತಿಳಿಸಿದ್ದಾರೆ.. ಅದಕ್ಕೆ ಹೇಳುವುದು ಹೆಚ್ಚು ಹಣ ಮಾಡಿದರೂ ಕಷ್ಟ, ಕಡಿಮೆ ಹಣ ಮಾಡಿದರೂ ಕಷ್ಟ.. ಹೆಚ್ಚು ಹಣ ಮಾಡಿ ಅದಕ್ಕೆ ಸರಿಯಾದ ದಾಖಲೆಗಳಿಲ್ಲದಿದ್ದರೆ ಈ ರೀತಿ ಆಗುವುದು ಕಾಮನ್… ಆದ ಕಾರಣ ನಾವು ದುಡಿಯುವ ಹಣಕ್ಕೆ ಸರಿಯಾದ ದಾಖಲಾತಿಗಳು ಇರಬೇಕು..
Comments