ಡಿಕೆಶಿಗೆ ಎದುರಾಯ್ತು ಮತ್ತೊಂದು ಸಂಕಷ್ಟ..!! ಇಡಿ ಬಂಧನದಲ್ಲಿ ಮತ್ತಷ್ಟು ದಿನ…!!!

10 Sep 2019 2:47 PM | Politics
1102 Report

ಸದ್ಯ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಯಲ್ಲಿರುವ ಸುದ್ದಿ ಎಂದರೆ ಅದು ಡಿಕೆಶಿ ಬಂಧನದ ವಿಷಯ.. ಇದೀಗ ಇಡಿ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಗೆ ಮತ್ತೊಂದು ಸಂಕಷ್ಟ ಎದುಗಾಗಿರುವ ಆಗಿದೆ.  ಮತ್ತಷ್ಟು ವಿಚಾರಣೆಗಾಗಿ ಡಿಕೆಶಿ ಅವರನ್ನು ಮತ್ತೆ ನಾಲ್ಕು ದಿನ ಕಸ್ಟಡಿಗೆ ಕೇಳಲು ಇಡಿ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.. ಒಂದು ವೇಳೆ ವಿಶೇಷ ಕೋರ್ಟ್ ಇದಕ್ಕೆ ಸಮ್ಮತಿಸಿದರೆ  ಇನ್ನೂ ಸ್ವಲ್ಪ ದಿನ ಮಾಜಿ ಸಚಿವ ಡಿಕೆ ಶಿವಕುಮಾರ್ ಇಡಿ ಕಸ್ಟಡಿಯಲ್ಲೆ ಇರಬೇಕಾಗುತ್ತದೆ.

ಅಕ್ರಮ ಹಣ ವರ್ಗಾವಣೆ, ಹವಾಲಾ ಪ್ರಕರಣಗಳ್ಲಿ ಕಳೆದೊಂದು ವಾರದಿಂದ ಇಡಿ ಕಸ್ಟಡಿಯಲ್ಲಿರುವ ಡಿಕೆಶಿ, ಇಂದು ಏಳನೇ ದಿನದ ವಿಚಾರಣೆಯಲ್ಲಿದ್ದಾರೆ. ಸೆಪ್ಟೆಂಬರ್ 4 ರಿಂದ 13 ರ ವರೆಗೂ ಅಂದರೆ ಒಟ್ಟು 10 ದಿನಗಳ ಕಾಲ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಕಸ್ಟಡಿಗೆ ನೀಡಿ ವಿಶೇಷ ಕೋರ್ಟ್ ಆದೇಶಿಸಿತ್ತು. ಆದೇಶದಂತೆ ಇನ್ನೂ ಮೂರು ದಿನಗಳಲ್ಲಿ ಕಸ್ಟಡಿ ಅಂತ್ಯವಾಗಲಿದೆ. ಆದರೆ ಜಾಮೀನು ಪಡೆದು ಹೊರಬರಬೇಕು ಅಂದುಕೊಂಡಿದ್ದ ಡಿ.ಕೆ.ಶಿವಕುಮಾರ್ ಗೆ ಹೊಸ ಸಂಕಷ್ಟ ಎದುರಾಗಿದೆ ಎನ್ನಲಾಗುತ್ತಿದೆ. ಡಿಕೆಶಿ ಯಾವುದೇ ವಿಚಾರಣೆಗೆ ಸ್ಪಂದಿಸುತ್ತಿಲ್ಲ. ಯಾವುದೇ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡುತ್ತಿಲ್ಲ... ಏನೇ ಪ್ರಶ್ನೆ ಕೇಳಿದರೂ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಇನ್ನೂ ನಾಲ್ಕು ದಿನ ಕಸ್ಟಡಿಗೆ ವಿಸ್ತರಣೆ ಮಾಡುವಂತೆ ಇಡಿ ಅಧಿಕಾರಿಗಲು ಕೋರ್ಟಿಗೆ ಮನವಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.  ಒಂದು ವೇಳೆ ವಿಶೇಷ ನ್ಯಾಯಾಲಯ ಇದಕ್ಕೆ ಒಪ್ಪಿದರೆ ಮತ್ತೆ ಕೆಲ ದಿನಗಳ ಕಾಲ ಡಿಕೆಶಿ ಇಡಿ ಕಸ್ಟಡಿಯಲ್ಲಿಯೇ ಇರಬೇಕಾಗುತ್ತದೆ.

 

Edited By

Manjula M

Reported By

Manjula M

Comments