ಮತ್ತೆ ಶುರುವಾಯ್ತು ಆಪರೇಷನ್ ಕಮಲ..!! ಬಿಜೆಪಿ ಕಡೆ ಮುಖ ಮಾಡಿದ ಮತ್ತಷ್ಟು ಶಾಸಕರು..!!!

06 Sep 2019 9:38 AM | Politics
859 Report

ಈಗಾಗಲೇ ರಾಜಕೀಯದಲ್ಲಿ ಸಾಕಷ್ಟು ವಿಷಯಗಳು ಚರ್ಚೆಯಾಗುತ್ತಿವೆ.. ದೋಸ್ತಿ ಸರ್ಕಾಋ ಪತನವಾಗಲು ಅತೃಪ್ತ ಶಾಸಕರ ರಾಜೀನಾಮೆಯೇ ಕಾರಣ ಎಂಬುದು ತಿಳಿದಿರುವ ವಿಷಯವೇ. 17 ಮಂದಿ ಶಾಸಕರುಗಳ ರಾಜೀನಾಮೆಯಿಂದಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿದ್ದು, ಅದೇ ಸಮಯದಲ್ಲಿ ಬಿಜೆಪಿಯ 'ಆಪರೇಷನ್ ಕಮಲ'ಕ್ಕೆ ದೋಸ್ತಿಗಳು ನಡುಗಿ ಹೋಗಿದ್ದರು..

ಆದರೆ ಇದೀಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ಕೂಡ ಮತ್ತೊಂದು ಸುತ್ತಿನ ಆಪರೇಷನ್ ಕಮಲಕ್ಕೆ ಸಿದ್ಧವಾಗುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಅದಷ್ಟೆ ಅಲ್ಲದೆ ಕಾಂಗ್ರೆಸ್-ಜೆಡಿಎಸ್ ನಾಯಕರು ತಮ್ಮ ಶಾಸಕರುಗಳನ್ನು ಹಿಡಿದಿಟ್ಟುಕೊಳ್ಳಲು ಹರಸಾಹಸ ನಡೆಸುತ್ತಿದ್ದಾರೆ. ಈಗಾಗಲೇ ಕೆಲವು ಶಾಸಕರು ಬಿಜೆಪಿಯೊಂದಿಗೆ ಗುರುತಿಸಿಕೊಳ್ಳಲು ಮಾನಸಿಕವಾಗಿ ಸಜ್ಜಾಗಿದ್ದಾರೆಂದು ಹೇಳಲಾಗಿದೆ. ಜೆಡಿಎಸ್ ನ ಹಿರಿಯ ಶಾಸಕ ಜಿ.ಟಿ. ದೇವೇಗೌಡ ಬಹಿರಂಗವಾಗಿಯೇ ಬಿಜೆಪಿ ನಾಯಕರನ್ನು ಹಾಡಿ ಹೊಗಳುತ್ತಿದ್ದು ರಾಜಕೀಯದಿಂದ ನಿವೃತ್ತಿ ಷೋಷಿಸಿಕೊಂಡಿದ್ದಾರೆ.

Edited By

Manjula M

Reported By

Manjula M

Comments