'ಆಪರೇಷನ್‌ ಕಮಲ'ದ ಬಗ್ಗೆ ಹೊಸ ಬಾಂಬ್ ಸಿಡಿಸಿದ HDK..!!

05 Sep 2019 10:10 AM | Politics
3911 Report

ಸದ್ಯ ರಾಜಕೀಯ ವಲಯದಲ್ಲಿ ಯಾರು ಊಹಿಸಲಾರದ ರೀತಿಯಲ್ಲಿ ಬೆಳವಣಿಗೆಗಳು ನಡೆಯುತ್ತಿವೆ.. ಹಿಂದೆ ಇದ್ದ ದೋಸ್ತಿ ಸರ್ಕಾರವು ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳುಗಳೇ ಕಳೆಯಿತು.. ಆದರೆ ಇನ್ನೂ ಯಾವುದು ಸರಿ ಇಲ್ಲ ಎನ್ನುವಂತಾಗಿದೆ.. ದೋಸ್ತಿಗಳ ಅತೃಪ್ತ ಶಾಸಕರೇ ದೋಸ್ತಿ ಸರ್ಕಾರ ಪತನವಾಗುವುದಕ್ಕೆ ಕಾರಣವಾಯಿತು..  ಬಿಜೆಪಿ ಪಕ್ಷದವರು ಆಪರೇಷನ್ ಕಮಲ ಮಾಡಿ ನಮ್ಮ ಶಾಸಕರನ್ಗನು ಕರೆದುಕೊಂಡಿದ್ದಾರೆ ಎಂಬುದು ದೋಸ್ತಿಗಳ ಮಾತು..

ಬಿಜೆಪಿ ಸರ್ಕಾರ ರಚನೆಯಾದರೂ ಕೂಡ ಇನ್ನೂ ಆಪರೇಷನ್ ಕಮಲ ನಿಂತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.  ಪ್ರತಿಪಕ್ಷಗಳಲ್ಲಿನ 15ರಿಂದ 20 ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಕುಮಾರಸ್ವಾಮಿಯವರು ಬುಧವಾರ ಮಾಧ್ಯಮದವರ  ಜೊತೆ ಮಾತನಾಡಿ ಶಾಸಕ ಡಿ.ಕೆ ಶಿವಕುಮಾರ್‌ ಅವರ ಬಂಧನಕ್ಕೆ ಸಂಬಂಧಪಟ್ಟಂತೆ ಮಾತನಾಡುತ್ತ ಈ ವಿಷಯವನ್ನು ತಿಳಿಸಿದರು. ಇದೇ ಸಮಯದಲ್ಲಿ ಅವರು ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರವೂ ಆಪರೇಷನ್ ಕಮಲ ನಿಂತಿಲ್ಲ ಎಂದಿದ್ದಾರೆ. ಇನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರವೂ ಆಪರೇಷನ್ ಕಮಲ ನಿಂತಿಲ್ಲ. ಇನ್ನೂ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಲೇ ಇದ್ದಾರೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.

Edited By

Manjula M

Reported By

Manjula M

Comments