ಜೆಡಿಎಸ್​ ಪಕ್ಷಕ್ಕೆ ಕೈಕೊಟ್ಟು ಕಮಲ ಹಿಡೀತಾರ ಈ ಪ್ರಭಾವಿ ಶಾಸಕ..!!

31 Aug 2019 2:54 PM | Politics
1743 Report

ಅದ್ಯಾಕೋ ಬಿಜೆಪಿ ಯ ಲಕ್ ಚೆನ್ನಾಗಿದೆ ಅನಿಸುತ್ತಿದೆ…  ದೋಸ್ತಿ ನಾಯಕರಲ್ಲಿ ಒಬ್ಬೊಬ್ಬರೆ ಬಿಜೆಪಿಗೆ ಸೇರಿಕೊಳ್ಳುತ್ತಿದ್ದಾರೆ. ದೋಸ್ತಿ ನಾಯಕರಿಗೆ ಅತೃಪ್ತ ಶಾಸಕರು ಕೈಕೊಟ್ಟಿದ್ದಕ್ಕೆ ಬಿಜೆಪಿ ಸರ್ಕಾರ ಅಧಿಕಾರ ಬಂದಿದೆ. ಮೊನ್ನೆ ಮೊನ್ನೆಯಷ್ಟೇ ಜೆಡಿಎಸ್ ಶಾಸಕ ಜಿಡಿಟಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಜೈಕಾರ ಹಾಕಿ, ಅವರನ್ನು ಹಾಡಿ ಹೊಗಳಿದ್ದರು.. ಅಷ್ಟೆ ಅಲ್ಲದೆ ಅವರ ಜೊತೆ ಕಾಣಿಸಿಕೊಂಡಿದ್ದು ಸಾಕಷ್ಟು ಚರ್ಚೆಯನ್ನು ಸೃಷ್ಟಿಸಿತ್ತು..  

ಜೆಡಿಎಸ್’ನ ಕಟ್ಟಾಳು ಎಂದೇ ಕರೆಸಿಕೊಂಡಿರುವ ಸಿಎಸ್ ಪುಟ್ಟರಾಜು, ಬಿಜೆಪಿ ಸಚಿವ ಜೆಸಿ ಮಾಧುಸ್ವಾಮಿಯೊಂದಿಗೆ ಕಾಣಿಸಿಕೊಳ್ಳುವ ಮೂಲಕ, ಜೆಡಿಎಸ್ ಬಿಟ್ಟು ಕಮಲ ಹಿಡಿಯುತ್ತಾರಾ ಎಂಬ ಅನುಮಾನಕ್ಕೆ ಇದೀಗ ಕಾರಣರಾಗಿದ್ದಾರೆ. ಜೆಸಿ ಮಾಧುಸ್ವಾಮಿಯವರು ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ, ಮಂಡ್ಯಕ್ಕೆ ಭೇಟಿ ನೀಡಿದರು. ಮಂಡ್ಯದ ಮೇಲುಕೋಟೆಗೆ ತೆರಳಿದ ಅವರು, ಚೆಲುವರಾಯಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಈ ವೇಳೆ ಸಚಿವ ಜೆಸಿ ಮಾಧುಸ್ವಾಮಿಗೆ ಸಾಥ್ ನೀಡಿದ್ದು ಬಿಜೆಪಿಯ ಮುಖಂಡರಿಗಿಂತ, ಜೆಡಿಎಸ್ ನ ಮುಖಂಡ ಸಿಎಸ್ ಪುಟ್ಟರಾಜು ಸಾಥ್  ನೀಡಿದ್ದಾರೆ. ಇದೀಗ ಈ ವಿಷಯ ಬಾರೀ ಚರ್ಚೆಯಲ್ಲಿ ಇದೆ. ಪುಟ್ಟರಾಜು ಬಿಜೆಪಿಗೆ ಸೇರುತ್ತಾರ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ… ಇದಕ್ಕೆಲ್ಲಾ ಅವರೇ ಉತ್ತರ ನೀಡಬೇಕಿದೆ..

Edited By

Manjula M

Reported By

Manjula M

Comments