ಮಂಡ್ಯ ಸಂಸದೆ ಸುಮಲತಾ ಮುಂದೆ ಕಣ್ಣೀರಿಟ್ಟ ಜೆಡಿಎಸ್ ಶಾಸಕ..!!!

30 Aug 2019 4:10 PM | Politics
1765 Report

ಮಂಡ್ಯ ಲೋಕಸಭಾ ಅಖಾಡದಿಂದ ಸುಮಲತ ಜಯಶಾಲಿಯಾಗಿ ಮಂಡ್ಯದ ಸಂಸದೆಯಾಗಿ ಹೊರಬಂದಿದ್ದಾರೆ. ಇದೀಗ ಸಂಸದೆ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿಯೇ ಮಂಡ್ಯದ ಜನತೆಯ ಕಷ್ಟ ಸುಖವನ್ನು ವಿಚಾರಿಸುತ್ತಾ ಮಂಡ್ಯದ ಅಭಿವೃದ್ದಿಯತ್ತ ಗಮನಕೊಡುತ್ತಿದ್ದಾರೆ.. ದೋಸ್ತಿ ಸರ್ಕಾರ ಪತನವಾದ ಮೇಲೆ ರಾಜಕೀಯ ವಲಯದಲ್ಲಿ ಸಾಕಷ್ಟು  ಬದಲಾವಣೆಗಳು ಆಗಿವೆ.

ಸಂಸದೆ ಸುಮಲತಾ ಅಂಬರೀಶ್ ಅವರನ್ನು ಜೆಡಿಎಸ್ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಭೇಟಿಯಾಗಿದ್ದು, ಅವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನಾರಾಯಣಗೌಡ ಅವರು ಸುಮಲತಾ ಅವರನ್ನು ಗುರುವಾರ ಮಂಡ್ಯದ ಕೆಆರ್‍ಎಸ್‍ನ ಖಾಸಗಿ ಹೋಟೆಲ್ ನಲ್ಲಿ ಭೇಟಿಯಾಗಿದ್ದರು. ಈ ವೇಳೆ 1996 ರ ಕೆ.ಆರ್.ಪೇಟೆ ಉಪ ಚುನಾವಣೆ ಸನ್ನಿವೇಶವನ್ನು ಪ್ರಸ್ತಾಪಿಸಿ ಜೆಡಿಎಸ್ ನಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೊಟ್ಟು ಜೆಡಿಎಸ್ ನವರು ನನ್ನ ಸೋಲಿಸಲು ಹುನ್ನಾರ ನಡೆಸಿದ್ದರು. ಆದರೆ ದೇವರ ಆಶೀರ್ವಾದ ಇತ್ತು, ಹೀಗಾಗಿ ನಾನು ಗೆದ್ದೆ ಎಂದು ಸಂಸದೆ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ… ಇನ್ನು ಮುಂದೆ ಯಾವ್ಯಾವ ರೀತಿಯ ಬದಲಾವಣೆಗಳು ಆಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments