ಪ್ರಮುಖ ಖಾತೆ ತಮ್ಮಲ್ಲೇ ಉಳಿಸಿಕೊಂಡ ಸಿಎಂ ಯಡಿಯೂರಪ್ಪ.. !! ಪ್ರಭಾವಿ ಖಾತೆ ಯಾರ ಪಾಲಿಗೆ ಗೊತ್ತಾ..?
ಬಿಎಸ್ವೈ ಮುಖ್ಯಮಂತ್ರಿಯಾಗಿ ಒಂದು ತಿಂಗಳು ಕಳೆಯಿತು.. ಸಚಿವ ಸಂಪುಟವೂ ಕೂಡ ವಿಸ್ತರಣೆ ಆಗಿ ಖಾತೆ ಹಂಚಿಕೆಯೂ ಕೂಡ ಆಯಿತು. ಇದೆಲ್ಲದರ ನಡುವೆ ಕೆಲವು ಶಾಸಕರು ಸಚಿವ ಸ್ಥಾನ ತಪ್ಪಿದ್ದಕ್ಕಾಗಿ ಬೇಸರಗೊಂಡಿದ್ದಾರೆ. ಇನ್ನೂ ಸಚಿವ ಸ್ಥಾನ ಸಿಕ್ಕಿರುವವರು ಕೂಡ ಸಿಕ್ಕಿರುವ ಖಾತೆಗಳ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಸಿಎಂ ಯಡಿಯೂರಪ್ಪ 17 ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಇನ್ನೂ ಸಂಪುಟ ವಿಸ್ತರಣೆ ಆಗಬೇಕಿರುವ ಹಿನ್ನಲೆಯಲ್ಲಿ ಪ್ರಮುಖ ಖಾತೆಗಳನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.
ಈ ಪ್ರಮುಖ ಖಾತೆಗಳನ್ನು ಯಾರ್ಯಾರಿಗೆ ಹಂಚುತ್ತಾರೆ ಎಂಬುದು ಕುತೂಹಲವನ್ನು ಕೆರಳಿಸಿದೆ. ಇದೀಗ ಸಿಎಂ ಯಡಿಯೂರಪ್ಪ ಬಳಿ ಹಣಕಾಸು, ಇಂಧನ, ಜಲಸಂಪನ್ಮೂಲ, ಆಹಾರ ಮತ್ತು ನಾಗರಿಕ ಸರಬರಾಜು, ನಗರಾಭಿವೃದ್ಧಿ, ಬೆಂಗಳೂರು ನಗರಾಭಿವೃದ್ಧಿ, ಅರಣ್ಯ, ಸಹಕಾರ, ಗುಪ್ತಚರ, ವಾರ್ತಾ ಮತ್ತು ಪ್ರಸಾರ, ರೇಷ್ಮೆ, ಸಕ್ಕರೆ, ಸಣ್ಣಕೈಗಾರಿಕೆ, ಬಂಧಿಖಾನೆ, ತೋಟಗಾರಿಕೆ ಖಾತೆಗಳನ್ನು ಉಳಿಸಿಕೊಂಡಿದ್ದಾರೆ. ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಮೂವರು ಉಪಮುಖ್ಯಮಂತ್ರಿಗಳು ಸೇರಿದಂತೆ 17 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು ಯಡಿಯೂರಪ್ಪ ಪ್ರಮುಖ ಖಾತೆ ಉಳಿಸಿಕೊಂಡಿದ್ದಾರೆ.. ಈ ಖಾತೆಗಳನ್ನು ಯಾರ್ಯಾರಿಗೆ ನೀಡುತ್ತಾರೋ ಗೊತ್ತಿಲ್ಲ..ಆ ಸಮಯದಲ್ಲಿ ಅದೆಷ್ಟು ಶಾಸಕರು ಬೇಸರ ವ್ಯಕ್ತ ಪಡಿಸುತ್ತಾರೋ ಗೊತ್ತಿಲ್ಲ..
Comments