`KMF' ಅಧ್ಯಕ್ಷ ಸ್ಥಾನ ಯಾರಿಗೆ ಗೊತ್ತಾ..!?
ಸದ್ಯ ಈಗಾಗಲೇ ಬಿಜೆಪಿ ಸಚಿವ ಸಂಪುಟ ಖಾತೆಗಳು ಹಂಚಿಕೆಯಾಗಿದ್ದು ಸದ್ಯ ಖಾತೆ ಪಡೆದ ಸಚಿವರು ಖುಷಿಯಲ್ಲಿದ್ದಾರೆ.. ಸಚಿವ ಸ್ಥಾನ ಸಿಗದವರು ಬಿಜೆಪಿ ಸರ್ಕಾರದ ಮೇಲೆ ಕೊಂಚ ಬೇಸರಗೊಂಡಿದ್ದಾರೆ. ಇದೀಗ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕಾಗಿ ಸಾಕಷ್ಟು ಶಾಸಕರು ಲಾಭಿ ನಡೆಸುತ್ತಿದ್ದಾರೆ. ಇದೀಗ ಕೆಎಂಎಫ್ ಅಧ್ಯಕ್ಷ ಸ್ಥಾನದ ಕುರಿತು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಕೂಡ ಕೆಎಂಎಫ್ ಅಧ್ಯಕ್ಷನಾಗಬೇಕು ಎಂದುಕೊಂಡಿದ್ದೇನೆ. ಅದಕ್ಕಾಗಿ ನಾನು ಸಚಿವ ಸ್ಥಾನಕ್ಕೆ ಪ್ರಯತ್ನ ನಡೆಸಲಿಲ್ಲ ಎಂದು ತಿಳಿಸಿದ್ದಾರೆ.
ರಮೇಶ್ ಜಾರಕಿಹೋಳಿಯವರು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ವಿಚಾರವಾಗಿ ಮಾತನಾಡಿದರು.. ಆ ಸಂದರ್ಭದಲ್ಲಿ ಹಿಂದೆಯೇ ನಾನು ಅಧ್ಯಕ್ಷನಾಗಬೇಕು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪಗೆ ತಿಳಿಸಿದ್ದೆ.. ಕೆಎಂಎಫ್ ಚುನಾವಣೆ ಮುಂದೂಡಿದ ದಿನದಿಂದಲೂ ಅದರ ಅಧ್ಯಕ್ಷನಾಗಬೇಕು ಎಂದುಕೊಂಡಿದ್ದೇನೆ ಎಂದು ತಿಳಿಸಿದರು.12 ಜನ ಮಂಡಳಿ ನಿರ್ದೇಶಕರು ಇದ್ದಾರೆ. ಇಬ್ಬರು ಅಧಿಕಾರಿಗಳು, ಒಬ್ಬ ನಾಮ ನಿರ್ದೇಶನ ಸೇರಿ 15 ಜನರಿದ್ದಾರೆ. ಎಲ್ಲರೂ ಸೇರಿ ನಿಮಗೆ ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದಾರೆ ಹೀಗಾಗಿ ಚುನಾವಣೆ ನಡೆದರೂ, ನಡೆಯದೇ ಇದ್ದರೂ ಗೆಲ್ಲುವ ವಿಶ್ವಾಸ ಇದೆ ಎಂದರು. ಒಟ್ಟಿನಲ್ಲಿ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗದಿದ್ದರು ರಮೇಶ್ ಜಾರಕಿಹೋಳಿಗೆ ಕೆಎಂಎಫ್ ಸ್ಥಾನ ಪಕ್ಕಾ ಎಂಬ ಮಾತುಗಳು ಕೇಳಿ ಬರುತ್ತಿವೆ.
Comments