ಮೈತ್ರಿ ಸರ್ಕಾರ ಪತನವಾಗಲೂ ಈ ನಾಲ್ವರೇ ಕಾರಣವಂತೆ..!!

24 Aug 2019 2:56 PM | Politics
526 Report

ಮೈತ್ರಿ ಸರ್ಕಾರ ಪತನಗೊಂಡ ಮೇಲೆ ಸಾಕಷ್ಟು ವಿಷಯಗಳು ಹೊರ ಬರುತ್ತಿವೆ.. ಒಬ್ಬರ ಮೇಲೆ ಒಬ್ಬರು ಆರೋಪಗಳನ್ನು ಮಾಡುತ್ತಾ ಮೈತ್ರಿ ಪತನವಾಗಲು ಕಾರಣ ಯಾರು ಎಂಬುದನ್ನು ಹುಡುಕುತ್ತಲೇ ಕಾಲ ವ್ಯರ್ಥ ಮಾಡುತ್ತಿದ್ದಾರೆ…ಆದರೆ ಇದೀಗ ಎ ಮಂಜು ಮತ್ತೊಂದು ಮಾಹಿತಿಯನ್ನು ತಿಳಿಸಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಕೇವಲ ನಾಲ್ಕು ಜನರಿಗೆ ಇದ್ದ ಸರ್ಕಾರ. ಕುಮಾರಸ್ವಾಮಿ, ರೇವಣ್ಣ, ಪರಮೇಶ್ವರ್, ಡಿ.ಕೆ.ಶಿವಕುಮಾರ್ ಅವರಿಗಾಗಿ ಇದ್ದ ಸರ್ಕಾರ ಎಂದಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಸಿದ್ದರಾಮಣ್ಣ ಈಗ ಮಾತನಾಡುತ್ತಿರುವುದು ರೈಲು ಹೋದ ಮೇಲೆ ಟಿಕೆಟ್ ಪಡೆದುಕೊಂಡಂತೆ. ಈಗ ಮಾತನಾಡಿ ಪ್ರಯೋಜನವಿಲ್ಲ…ದೇವೇಗೌಡರ ಕುಟುಂಬ ಏನು ಅಂತ ಎಲ್ಲರಿಗೂ ತಿಳಿದಿದೆ ಎಂದರು . ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ಶಾಸಕರಿಗೆ ಉಪಯೋಗ ಆಗಿಲ್ಲ. ಅದೊಂದು ಸಿಂಗಲ್ ವಿಂಡೋ ಸರ್ಕಾರ ಎಂದು ಕಿಡಿಕಾರಿದರು. ಇನ್ನು ದೇವೇಗೌಡರು ಅವರ ಮಗನಿಗೆ ಅಧಿಕಾರ ಹೋಗಿದೆ ಎಂದು ಈಗ ಏನೇನೋ ಮಾತನಾಡುತ್ತಿದ್ದಾರೆ. ಅವರ ಮಗನ ಅಧಿಕಾರವನ್ನು ಯಾರು ಕಿತ್ತುಕೊಂಡಿಲ್ಲ. ಕೊಟ್ಟ ಅಧಿಕಾರವನ್ನು ನಡೆಸಲಾಗದೆ ಕೆಳಗೆ ಇಳಿದಿದ್ದಾರೆ ಎನ್ನಬಹುದು. ಒಟ್ಟಿನಲ್ಲಿ ಮೈತ್ರಿ ಸರ್ಕಾರ  ಪತನವಾಗಲೂ ಇದ್ದಂತಹ ಸಮಸ್ಯೆಗಳನ್ನು ಒಬ್ಬೊಬ್ಬರೇ ಎಲ್ಲರೂ ಕೂಡ ತಿಳಿಸುತ್ತಿದ್ದಾರೆ…

Edited By

Manjula M

Reported By

Manjula M

Comments