ಬಿಜೆಪಿ ಜೊತೆ  ಸೇರಿ ಸರ್ಕಾರ ರಚಿಸಲು ಕುಮಾರಸ್ವಾಮಿ ರೆಡಿ..!! ದೇವೆಗೌಡರ ಹೊಸ ವರಸೆ..!!!

24 Aug 2019 11:23 AM | Politics
5313 Report

ರಾಜ್ಯದ ರಾಜಕೀಯ ಸದ್ಯ ಮೇಲ್ನೋಟಕ್ಕೆ ಎಲ್ಲಾ ಸರಿ ಕಂಡರೂ ಒಳಗೊಳಗೆ ಮುಸುಕಿನ ಗುದ್ದಾಟಗಳು ನಡೆಯುತ್ತಿವೆ.ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿದಕ್ಕೆ ಎಲ್ಲರೂ ಒಂದೊಂದು ರೀತಿಯ ಕಾರಣಗಳನ್ನು ಕೊಡುತ್ತಿದ್ದಾರೆ.. ಇದೀಗ ಎಚ್ ಡಿ  ದೇವೆಗೌಡರು ಹೊಸ ಬಾಂಬ್ ಸಿಡಿಸಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಲು ಮುಂದಾಗಿದ್ದರು ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೆಗೌಡರು ತಿಳಿಸಿದ್ದಾರೆ.

ನಮ್ಮ ಜೊತೆ ಸೇರಿ ಸರ್ಕಾರ ರಚಿಸಲು ಬಿಜೆಪಿ ಸಿದ್ಧವಾಗಿತ್ತು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಈ ಹಿಂದೆ ಬಿಜೆಪಿ ಜತೆ ಸೇರಿ ಸರ್ಕಾರ ರಚನೆ ಮಾಡಿದಾಗಲೂ ತಾವು ಇಷ್ಟೊಂದು ನೋವು ನಮಗೆ ಆಗಿರಲಿಲ್ಲಾ. ಆದರೆ ಎಲ್ಲಾ ನೋವು ಸಹಿಸಿಕೊಂಡು ಸರ್ಕಾರ ‌ನಡೆಸುವಂತೆ ತಾವೇ ಕುಮಾರಸ್ವಾಮಿಗೆ ಸೂಚನೆ ನೀಡಿದ್ದೇ ಎಂದು ತಿಳಿಸಿದರು...ಇದೇ ವೇಳೆ ಮುಂದಿನ ಉಪಚುನಾವಣೆಯಲ್ಲಿ ಸೀಟು ಹಂಚಿಕೆಯ ಬಗ್ಗೆ ಸೋನಿಯಾಗಾಂಧಿ ಏನಾದರೂ ಮಾತನಾಡಿದರೆ ಮುಂದಿನದ್ದನ್ನು ಆಮೇಲೆ ನೋಡೋಣ ಎಂದು ದೇವೇಗೌಡ ಹೇಳಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ನಾವು ಕೆಟ್ಟೋ ಎನ್ನುವ ರೀತಿಯಲ್ಲಿ ದೇವೆಗೌಡರು ಹೇಳಿದ್ದಾರೆ.

Edited By

Manjula M

Reported By

Manjula M

Comments