ನಿಖಿಲ್ ಕುಮಾರಸ್ವಾಮಿ ಸೋಲಿಗೆ ನಾನೇ ಕಾರಣ..!! ಮಾಜಿ ಸಿಎಂ ನ ಹೊಸ ಬಾಂಬ್..
ದೋಸ್ತಿ ಸರ್ಕಾರ ಪತನವಾದ ಮೇಲೆ ಆರೋಪಗಳ ಮತ್ತು ಪ್ರತ್ಯಾರೋಪಗಳ ಸುರಿಮಳೆಯೇ ಸುರಿಯುತ್ತಿವೆ.. ಒಂದು ಕಡೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಂದು ಕಡೆ ಮಾಜಿ ಸಿಎಂ ಕುಮಾರಸ್ವಾಮಿಯ ಜಟಾಪಟಿ ನಡೆಯುತ್ತಿದೆ. ಮಾತಿನ ಮೂಲಕವೇ ಒಬ್ಬರಿಗೆ ಒಬ್ಬರು ಟಾಂಗ್ ಕೊಡುತ್ತಿದ್ದಾರೆ.. ದೇವೆಗೌಡರ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ..
ಸರ್ಕಾರ ಬೀಳಿಸಿದ್ದು ನಾನಲ್ಲ ಸ್ವಾಮಿ, ನೀವು. ನಿಮ್ಮ ಮಕ್ಕಳು. ಅಂತಹ ಬುದ್ಧಿ ನನಗಲ್ಲ ಇರೋದು ನಿಮಗೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ನಾಯಕರ ಮೇಲೆ ಕಿಡಿಕಾರಿದ್ದಾರೆ.ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ದೇವೇಗೌಡರಿಂಗೆ ಟಾಂಗ್ ಕೊಟ್ಟಿದ್ದಾರೆ. ಅಧಿಕಾರದಲ್ಲಿ ಯಾವತ್ತಿಗೂ ಮೂಗು ತೂರಿಸಿದವನಲ್ಲ. ಸಮನ್ವಯ ಸಭೆಯಲ್ಲಿ ನಿರ್ಣಯಿಸಿದ ಯಾವ ಕಾರ್ಯಕ್ರಮ ಜಾರಿಗೆ ತಂದಿದ್ದೀರಿ..? ಇದರಿಂದ ಶಾಸಕರು ಬೇಸತ್ತಿದ್ದರು. ನಿಮ್ಮ ಲೋಪಗಳಿಂದಲೇ ಸರ್ಕಾರ ಬಿದ್ದಿದೆ ಎಂದು ತಿಳಿಸಿದರು. ಅಷ್ಟೆ ಅಲ್ಲದೆ ನಮ್ಮ ಸೋಲಿಗೆ ಸಿದ್ದರಾಮಯ್ಯನೇ ಕಾರಣ ಎಂಬುದಕ್ಕೂ ತಿರುಗೇಟು ನೀಡಿರುವ ಮಾಜಿ ಸಿಎಂ, ನಾನೇನಿದ್ದರೂ ನೇರ ರಾಜಕಾರಣಿ. ನಿಮ್ಮಂಥೆ ಹಿಂದೆ ಮುಂದೆ ನಿಂತು ಆಟವಾಡವಲ್ಲ. ತಾತ, ಮೊಮ್ಮಕ್ಕಳು ಎಲೆಕ್ಷನ್‌ಗೆ ನಿಂತರು. ಅದಕ್ಕೆ ಜನ ತಿರಸ್ಕರಿಸಿದ್ದಾರೆ. ನಿಖಿಲ್ ಸೋಲಿಗೆ ನಾನೇ ಕಾರಣ ಆದರೆ, ಚಿಕ್ಕಬಳ್ಳಾಪುರ, ಮೈಸೂರಿನಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ಯಾರು..? ಎಂದು ಮರುಪ್ರಶ್ನೆ ಹಾಕಿದ್ದಾರೆ. ಒಟ್ಟಿನಲ್ಲಿ ದೋಸ್ತಿ ಸರ್ಕಾರ ಪತನವಾದರೂ ಜೆಡಿಎಸ್ ಕಾಂಗ್ರೆಸ್ ನಾಯಕರ ವಾಗ್ವಾದ ಮಾತ್ರ ಇನ್ನೂ ಕಡಿಮೆಯಾಗಿಲ್ಲ… ಈ ಮಾತು ಯಾವಾಗ ಮುಗಿಯುತ್ತದೆಯೋ ಗೊತ್ತಿಲ್ಲ.. ರಾಜಕೀಯದ ಸ್ಥಿತಿ ಎಲ್ಲಿಗೆ ಬದಲಾಗುತ್ತದೆಯೋ ಗೊತ್ತಿಲ್ಲ..
Comments