ದೋಸ್ತಿ ಸರ್ಕಾರ ಪತನಕ್ಕೆ ಕಾರಣ ಯಾರ್ ಗೊತ್ತಾ..? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ದೇವೆಗೌಡರು..!!!

23 Aug 2019 2:50 PM | Politics
636 Report

ಸದ್ಯ ಮೈತ್ರಿ ಸರ್ಕಾರ ಪತನಗೊಂಡ ಮೇಲೆ ಆರೋಪ ಮತ್ತು ಪ್ರತ್ಯಾರೋಪಗಳು ಹೆಚ್ಚಾಗಿಯೇ ಕೇಳಿ ಬರುತ್ತಿವೆ.. ಮೇತ್ರಿ ಸರ್ಕಾರ ಪತನಗೊಳ್ಳಲು ಅತೃಪ್ತರೇ ಕಾರಣ ಎಂಬುದು ಒಂದು ಕಡೆ ಅದಕ್ಕೆಲ್ಲಾ ಬುನಾದಿ ಯಾರು ಪ್ರಶ್ನೆ ಇನ್ನೊಂದು ಕಡೆ.. ಇದೀಗ ದೋಸ್ತಿಯ ನಾಯಕರು ಅವರ ಮೇಲೆ ಇವರು, ಇವರ ಮೇಲೆ ಅವರು ಆರೋಪ, ಪ್ರತ್ಯಾರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಇದೀಗ ಮಾಜಿ ಪ್ರಧಾನಿ  ಹೆಚ್.ಡಿ ದೇವೆಗೌಡರು ಆರೋಪವನ್ನು ಮಾಡಿದ್ದಾರೆ..

ಮೈತ್ರಿ ಸರ್ಕಾರ ಪತನಕ್ಕೆ ಕಾಂಗ್ರೆಸ್ ನಾಯಕರೇ ಕಾರಣ. ಕಾಂಗ್ರೆಸ್ ಕೊಡುತ್ತಿದ್ದ ನೋವು ಸಹಿಸಿಕೊಂಡು ನಾನು ಊಟ ಮಾಡ್ತಿದ್ದೆ. ಕಾಂಗ್ರೆಸ್ ಹಿಂಸೆ ಸಹಿಸಲಾರದೇ ಕುಮಾರಸ್ವಾಮಿ ನನ್ನ ಬಳಿ ಕಣ್ಣೀರು ಹಾಕಿದ್ದರು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಆರೋಪಿಸಿದ್ದಾರೆ. ಇಂದು ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತ ಈ ವಿಷಯವನ್ನು ತಿಳಿಸಿದರು, ಈ ಸಮಯದಲ್ಲಿಯೇ  ಮೈತ್ರಿ ಸರ್ಕಾರ ನಾವು ಬೀಳಿಸಿದ್ರೇ ಮತ್ತೆ ನಮ್ಮ ಮೇಲೆ ಆರೋಪ ಮಾಡ್ತಾರೆ ಅಂತಾ ಸುಮ್ಮನೆ ಇದ್ದೆ. ಆದ್ದರಿಂದ ಸರ್ಕಾರ ಹೋದ ಮೇಲೆ ಇದೆಲ್ಲವನ್ನೂ ಹೇಳುತ್ತಿದ್ದೇನೆ. ಕುಮಾರಸ್ವಾಮಿಗೆ ಕಾಂಗ್ರೆಸ್‌ನವರು ನೀಡಿದ ಕಾಟ ಎಷ್ಟೆಂದು ನನಗೆ ಗೊತ್ತು. ಮೈತ್ರಿ ಸರ್ಕಾರ ಪತನಕ್ಕೆ ಕಾಂಗ್ರೆಸ್ ನಾಯಕರೇ ಕಾರಣ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ದೋಸ್ತಿ ಸರ್ಕಾರವಂತೂ ಪತನವಾಯ್ತು, ಇದೀಗ ಆ ಪಕ್ಷದ ನಾಯಕರೇ ಕಿತ್ತಾಡಿಕೊಳ್ಳುತ್ತಿದ್ದಾರೆ..ಮುಂದೆ ಏನಾಗುತ್ತದೆಯೋ ಕಾದು ನೋಡಬೇಕಿದೆ,

Edited By

Manjula M

Reported By

Manjula M

Comments