ನಾನು ಬಿಜೆಪಿಗೆ ಹೋಗಬೇಕು ಅನ್ನಿಸಿತ್ತು..!! `ಜೆಡಿಎಸ್' ಶಾಸಕ ನ ಹೊಸ ಬಾಂಬ್..
ಸದ್ಯದೋಸ್ತಿ ಸರ್ಕಾರ ಪತನವಾಗುದಕ್ಕೆ ಎಲ್ಲರಿಗೂ ಗೊತ್ತಿರುವ ಹಾಗೆ ಅತೃಪ್ತ ಶಾಸಕರೇ ಕಾರಣ. ದೋಸ್ತಿಗಳಿಗೆ ಕೈ ಕೊಟ್ಟ ಮೇಲೆ ಅತೃಪ್ತ ಶಾಸಕರು ಅನರ್ಹರಾಗಿದ್ದಾರೆ.. ಇದಾದ ಮೇಲೆಯೇ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ. ಅನರ್ಹ ಶಾಸಕರು ಸದ್ಯ ಅತಂತ್ರ ಸ್ಥಿತಿಯಲ್ಲಿದ್ದಾರೆ.ಇದೀಗ ಮತ್ತೊಬ್ಬ ಶಾಸಕ ಬಿಜೆಪಿಗೆ ಹೋಗಬೇಕಿತ್ತು ಎನಿಸಿತ್ತು ಎಂದು ಹೇಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನದ ನಂತರ ನಾವು ಬಿಜೆಪಿಗೆ ಹೋಗಬೇಕಿತ್ತು ಅನಿಸಿತ್ತು ಎಂದು ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಗೌಡ ತಿಳಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸರ್ಕಾರ ಬಿದ್ದೋದ ಮೇಲೆ ನಾವ್ಯಾಕೆ ಬಿಜೆಪಿ ಹೋಗ್ಲಿಲ್ಲ. ನಾವು ಹೋಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನ್ನಿಸಿತ್ತು. ಆದರೆ, ಅನರ್ಹ ಶಾಸಕರ ಬಗ್ಗೆ ಆತ್ಮಾವಲೋಕನ ಮಾಡಿಕೊಂಡರೆ ನಾವು ತೆಗೆದುಕೊಂಡ ನಿರ್ಧಾರವೇ ಸರಿ ಅನ್ನಿಸುತ್ತಿದೆ ಎಂದು ತಿಳಿಸಿದ್ದಾರೆ.. ಈಗಿನ ರಾಜಕೀಯ ಪರಿಸ್ಥಿತಿ ನೋಡಿದರೆ ನಾವೆಲ್ಲಾ ಮಧ್ಯಂತರ ಚುನಾವಣೆಗೆ ಸಿದ್ದವಾಗುವುದು ಒಳ್ಳೆಯದು ಎಂದಿದ್ದಾರೆ.. ಒಟ್ಟಿನಲ್ಲಿ ಮಧ್ಯಂತರ ಚುನಾವಣೆಗೆ ಈಗಾಗಲೇ ಎಲ್ಲಾ ರೀತಿಯ ಸಿದ್ದತೆಗಳು ಕೂಡ ನಡೆಯುತ್ತಿವೆ ಎಂಬುದು ಅವರ ಮಾತಿನಿಂದ ತಿಳಿಯುತ್ತದೆ..
Comments