ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಇಬ್ಬರು ಸಚಿವರಿಗೆ ಕೊಕ್…? ಯಾರ್ಯಾರು ಗೊತ್ತಾ..?
ಕಳೆದ ಮಂಗಳವಾರವಷ್ಟೆ ಬಿಎಸ್’ವೈ ಸಚಿವ ಸಂಪುಟ ವಿಸ್ತರಣೆಯಾಗಿದೆ.. ಕೆಲವು ಶಾಸಕರು ಸಚಿವ ಸ್ಥಾನ ಸಿಕ್ಕಿದ್ದಕ್ಕಾಗಿ ಖುಷಿಯಲ್ಲಿದ್ದರೆ ಮತ್ತೆ ಕೆಲವರು ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ರಾಜ್ಯ ಸರ್ಕಾರದ ಮೇಲೆ ಆಕ್ರೋಶವನ್ನು ವ್ಯಕ್ತ ಪಡಿಸಿದ್ದರು.. ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದಂತೆ ಸಚಿವ ಸ್ಥಾನ ವಂಚಿತ ಶಾಸಕರ ಅಸಮಾಧಾನ ಹೆಚ್ಚಾಗಿದೆ. ಅದರಲ್ಲೂ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿರುವುದರಿಂದ ಉಳಿದ ಶಾಸಕರು ಯಡಿಯೂರಪ್ಪನವರ ಮೇಲೆ ಗರಂ ಆಗಿದ್ದಾರೆ. .
ಸಚಿವ ಸಂಪುಟದಿಂದ ಲಕ್ಷ್ಮಣ ಸವದಿ ಅವರನ್ನು ಕೈಬಿಡುವಂತೆ ಒತ್ತಾಯಿಸಲಾಗುತ್ತಿದ್ದು, ಆದರೆ ಈ ವಿಚಾರದಲ್ಲಿ ಕಠಿಣ ನಿಲುವು ತಳೆದಿರುವ ಬಿಜೆಪಿ ಹೈಕಮಾಂಡ್, ಯಾವುದೇ ಕಾರಣಕ್ಕೂ ಲಕ್ಷ್ಮಣ ಸವದಿ ಅವರನ್ನು ಸಂಪುಟದಿಂದ ಕೈಬಿಡಬೇಡಿ ಯಡಿಯೂರಪ್ಪನವರಿಗೆ ಸೂಚಿಸಿದೆ ಎನ್ನಲಾಗಿದೆ. ಯಡಿಯೂರಪ್ಪನವರ ಸಂಪುಟದಲ್ಲಿ ಈಗಾಗಲೇ ಲಿಂಗಾಯಿತ ಸಮುದಾಯಕ್ಕೆ ಸೇರಿರುವ 8 ಮಂದಿ ಸಚಿವರಿದ್ದು, ಉಮೇಶ್ ಕತ್ತಿ ಸೇರ್ಪಡೆಗೊಂಡರೆ ಇವರ ಸಂಖ್ಯೆ 9 ಆಗುತ್ತದೆ. ಅಷ್ಟೆ ಅಲ್ಲದೆ ಸುಪ್ರೀಂ ಕೋರ್ಟ್ ತೀರ್ಪು ಅನರ್ಹ ಶಾಸಕರ ಪರವಾಗಿ ಬಂದ ವೇಳೆ ಬಿ.ಸಿ. ಪಾಟೀಲ್ ಅವರಿಗೂ ಸಚಿವ ಸ್ಥಾನ ನೀಡುವ ಅನಿವಾರ್ಯತೆ ಇದ್ದು, ಆಗ ಲಿಂಗಾಯಿತ ಸಚಿವರ ಸಂಖ್ಯೆ 10 ಕ್ಕೆ ಏರಿಕೆಯಾಗುತ್ತದೆ. ಇದು ಮತ್ತೊಂದು ರೀತಿಯ ಅಸಮಾಧಾನಕ್ಕೆ ಕಾರಣವಾಗಬಹುದೆಂಬ ಹಿನ್ನೆಲೆಯಲ್ಲಿ ಇಬ್ಬರು ಲಿಂಗಾಯಿತ ಸಚಿವರಿಗೆ ಕೊಕ್ ನೀಡಲು ಯಡಿಯೂರಪ್ಪನವರು ಚಿಂತನೆ ನಡೆಸಿದ್ದಾರೆನ್ನಲಾಗಿದೆ. ಒಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಲೋಕಸಭಾ ಚುನಾವಣೆಯ ನಂತರ ಸಾಕಷ್ಟು ಬದಲಾವಣೆಗಳು ಆಗಿವೆ… ಒಂದು ಕಡೆ ಅನರ್ಹ ಶಾಸಕರು, ಮತ್ತೊಂದು ಕಡೆ ಸಚಿವ ಸ್ಥಾನ ಸಿಗದ ಶಾಸಕರು ಬಿಎಸ್ ವೈ ಮೇಲೆ ತಿರುಗಿ ಬಿದ್ದರೂ ನೋ ಡೌಟ್..
Comments