ಕೇಂದ್ರ ಸರ್ಕಾರದ ಮೇಲೆ ಕಿಡಿಕಾರಿದ ಜೆಡಿಎಸ್..!! ಕಾರಣ..?

22 Aug 2019 12:59 PM | Politics
552 Report

ಬಿಜೆಪಿ ಸರ್ಕಾರದ ಮೇಲೆ ಇದೀಗ ಜೆಡಿಎಸ್  ಪಕ್ಷದವರು ಕಿಡಿಕಾರಿದ್ದಾರೆ.. ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರನ್ನು ಎನ್ ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಬಂಧಿಸಿರುವುದಕ್ಕೆ ಜೆಡಿಎಸ್ ಕೇಂದ್ರ ಸರ್ಕಾರದ ಮೇಲೆ ತೀವ್ರ ಆಕ್ರೋಶದ ಜೊತೆಗೆ ಕಿಡಿಕಾರಿದೆ.  ಪ್ರಜಾಪ್ರಭುತ್ವದ ಮೌಲ್ಯಗಳೇ ಮುಂದೆ ತಕ್ಕ ಉತ್ತರ ನೀಡಲಿದೆ ಎಂದು ಅವರು ಕಿಡಿಕಾರಿದ್ದಾರೆ.

ಈ ವಿಷಯಕ್ಕೆ  ಪ್ರತಿಕ್ರಿಯೆ ನೀಡಿರುವ  ಜೆಡಿಎಸ್​ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಮೇಶ್​ ಬಾಬು, ಚಿದಂಬರಂ ವಿಷಯದಲ್ಲಿ ಕೇಂದ್ರ ಸರ್ಕಾರ ಸಿಬಿಐ ದುರಪಯೋಗ ಮಾಡಿಕೊಂಡಿದೆ. ಬಿಜೆಪಿ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಚಿಕೆಗೇಡಿನ ರಾಜಕಾರಣ ಮಾಡುತ್ತಿದ್ದು, ಪ್ರತಿಪಕ್ಷಗಳ ನಾಯಕರನ್ನು ಜೈಲಿಗೆ ತಳ್ಳುವ ಮೂಲಕ ಕಾಯಂ ಆಗಿ ಅಧಿಕಾರದಲ್ಲಿ ಉಳಿಯುವ ಕನಸು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಇದೀಗ ಜೆಡಿಸ್ ನಾಯಕರುಗಳು ಕಿಡಿ ಕಾರುತ್ತಿದ್ದಾರೆ. ಒಟ್ಟಿನಲ್ಲಿ ದೋಸ್ತಿ ಪತನವಾದ ರಾಜಕೀಯ ಸ್ಥಿತಿ ಮತ್ತೊಂದೆಡೆ ಸಾಗುತ್ತಿದೆ.

Edited By

Manjula M

Reported By

Manjula M

Comments