ಅಂದು ಬಿಸ್ಕೆಟ್‌ ಎಸೆದ ರೇವಣ್ಣ, ಇಂದು ಸಂತ್ರಸ್ಥರ ನೋವು ಕೇಳದೇ ಬೆಲ್‌ ಹೊಡೆದ್ರು..!

21 Aug 2019 5:25 PM | Politics
336 Report

ಕೆಲ ಹಿಂದಿನಗಳ ಹಿಂದಷ್ಟೆ ಪತನಗೊಂಡ ದೋಸ್ತಿ ಸರ್ಕಾರದಲ್ಲಿ ಮುಖ್ಯಮಂತ್ರಿ ಗಿಂತ ಹೆಚ್ಚು ಸದ್ದು ಮಾಡಿದ್ದು ಹೆಚ್ ಡಿ ರೇವಣ್ಣ… ರೇವಣ್ಣ ಅವರು ಪದೇ ಪದೇ ಸುದ್ದಿಯಾಗುತ್ತಿದ್ದರು.. ಕಳೆದ ವರುಷ ಪ್ರವಾಹ ಸಂತ್ರಸ್ತರಿಗೆ ಬಿಸ್ಕೆಟ್ ಪ್ಯಾಕೆಟ್‌ಗಳನ್ನು ಎಸೆದು ಟೀಕೆಗೆ ಗುರಿಯಾಗಿದ್ದ ಮಾಜಿ ಸಚಿವ ಹೆಚ್‌.ಡಿ ರೇವಣ್ಣನವರು ಇದೀಗ ಮತ್ತೊಂದು ವಿವಾದವನ್ನು ಸೃಷ್ಟಿಸಿಕೊಂಡಿದ್ದಾರೆ..

ನೆರೆ ಸಂತ್ರಸ್ಥ ಪ್ರದೇಶಗಳಿಗೆ ಇಂದು ರೇವಣ್ಣನವರು ತಮ್ಮ ತಂಡದೊಂದಿಗೆ ಭೇಟಿಯನ್ನು  ನೀಡಿದ್ದರು, ನೆರೆ ಸಂತ್ರಸ್ಥ ಪ್ರದೇಶಗಳಿಗೆ ಭೇಟಿ ನೀಡಿ ನೆರೆ ಸಂತ್ರಸ್ತರ ಕಷ್ಟ ಕೇಳದೆ ಅಲ್ಲಿಯೂ ಕೂಡ ಬೇಜಾವಬ್ದಾರಿತನವನ್ನು ತೋರಿಸಿದ್ದಾರೆ. ರೇವಣ್ಣ ಅವರು ಇಂದು ಬೆಳಗಾವಿಯ ಗೋಕಾಕ್‌ನಲ್ಲಿರುವ ಪುನರ್‌ ವಸತಿ ಕೇಂದ್ರಕ್ಕೆ ಭೇಟಿ ನೀಡಿದ ಹೆಚ್‌.ಡಿ ರೇವಣ್ಣನವರು ಹಾಗೂ ಕೋನರೆಡ್ಡಿಯವರು ಭೇಟಿ ನೀಡಿದ್ದರು, ಇದೇ ಸಂದರ್ಭದಲ್ಲಿ ಮನೆಕಳೆದುಕೊಂಡ ಬಗ್ಗೆ ಕೋನರೆಡ್ಡಿ ಮುಂದೆ ಮಹಿಳೆಯೊಬ್ಬರು ಅಳುತ್ತ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದರೆ ರೇವಣ್ಣವರು ಮಾತ್ರ ತಮಗೂ ಅದಕ್ಕೂ ಸಂಬಂಧವಿಲ್ಲದಂತೆ ಬೆಲ್‌ ಹೊಡೆಯುತ್ತ ಸುಮ್ಮನೆ ಕುಳಿತುಕೊಂಡಿದ್ದರು, ಇದಲ್ಲದೇ ಸಮಸ್ಯೆಯನ್ನು ಹೇಳಲು ಬಂದವರನ್ನು ರೇವಣ್ಣನವರು ಹೀಗೆ ನಡೆಸಿಕೊಂಡದ್ದು ಎಷ್ಟರಮಟ್ಟಿಗೆ ಸರಿ ಅಂತ ಜನರು ಆಕ್ರೋಶ ವ್ಯಕ್ತಪಡಿಸಿದರು.  ಹೆಚ್ ಡಿ ರೇವಣ್ಣ ಲೋಕಸಭಾ ಚುನಾವಣೆಯಲ್ಲಿಯೂ ಕೂಡ ತಮ್ಮ ನಾಲಿಗೆಯನ್ನು ಹರಿಬಿಟ್ಟು ಸುದ್ದಿಯಾಗಿದ್ದರು..ಈಗಲೂ ಕೂಡ ಈ ರೀತಿ ಬೇಜಾವಬ್ದಾರಿತನದಿಂದ ನಡೆದುಕೊಳ್ಳುತ್ತಿದ್ದರೆ ಜನರು ಮತ್ತಷ್ಟು ಆಕ್ರೋಶ ವ್ಯಕ್ತ ಪಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ..

Edited By

Manjula M

Reported By

Manjula M

Comments