ಪೋನ್ ಕದ್ದಾಲಿಕೆ ವಿಚಾರಕ್ಕೆ ಕೊನೆಗೂ ದಾಖಲಾಯ್ತು ಎಫ್ ಐಆರ್..!

21 Aug 2019 1:15 PM | Politics
319 Report

ಸದ್ಯ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ವಿಷಯವೆಂದರೆ ಪೋನ್ ಟ್ಯಾಪಿಂಗ್,  ಹಿಂದೆ ಇದ್ದ ರಾಜ್ಯ ಸರ್ಕಾರದಲ್ಲಿ  ಪೋನ್ ಕದ್ದಾಲಿಕೆ ನಡೆದಿದೆ ಎಂದು ಹೇಳಲಾಗುತ್ತಿತ್ತು… ಬಹಳ ದಿನದಿಂದಲೂ ಕೂಡ ಈ ವಿಷಯ ಚರ್ಷೆಯಾಗುತ್ತಿದೆ..  ಇದೀಗ ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಫೋನ್ ಕದ್ದಾಲಿಕೆ ಪ್ರಕರಣ ಸಂಬಂಧ ಎಫ್ ಐಆರ್ ದಾಖಲಾಗಿದೆ.

ರಾಜ್ಯ ಸರ್ಕಾರವು ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿದ ಬೆನ್ನಲ್ಲೇ ಸಿಸಿಬಿ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಅವರಿಂದ ಸೈಬರ್ ಕ್ರೈಂ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಗಸ್ಟ್ 2 ರಂದು ಕೃತ್ಯ ನಡೆದಿದೆ ಎಂದು ಡಿಸಿಪಿ ದೂರು ದಾಖಲು ಮಾಡಿದ್ದಾರೆ. ಐಟಿ ಆ್ಯಕ್ಟ್ 2000 ಯು/ಎಸ್(72), ಟೆಲಿಗ್ರಾಫ್ ಆ್ಯಕ್ಟ್ 1885 ಯು/ಎಸ್ ಅಡಿಯಲ್ಲಿ ಎಫ್ ಐಆರ್ ದಾಖಲಾಗಿದೆ. ಆದರೆ ಎಫ್‌ಐಆರ್ ನಲ್ಲಿ ಕೃತ್ಯ ಎಸಗಿದವರ ಬಗ್ಗೆ ಮಾಹಿತಿ ದಾಖಲಿಸಿಲ್ಲ. ಎಫ್ ಐಆರ್ ನಲ್ಲಿ ದಾಖಲಿಸಬೇಕಿದ್ದ ಪ್ರಾಥಮಿಕ ಮಾಹಿತಿಯನ್ನು ಪೊಲೀಸರು ಹೈಡ್ ಮಾಡಿದ್ದಾರೆ. ಒಟ್ಟಿನಲ್ಲಿ ಪೋನ್ ಟ್ಯಾಪಿಂಗ್ ಆಗಿರುವುದು ನಿಜವಾದರೆ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆಗಳು ಆಗುತ್ತವೆ.. ಅಷ್ಟೆ ಅಲ್ಲದೆ ಸಿಪಿ ಯೋಗ್ವೇಶ್ವರ್ ಕೂಡ ಡಿಕೆಶಿ ಬಳಿ ದೊಡ್ಡ ಮೊತ್ತದ ಪೋನ್ ಟ್ಯಾಪಿಂಗ್ ಯಂತ್ರವಿದ್ದು ನಮ್ಮ ಪೋನ್ ಗಳನ್ನು ಕೂಡ ಟ್ಯಾಪ್ ಮಾಡಿದ್ದಾರೆ ಎನ್ನಲಾಗುತ್ತಿದೆ.. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಈ ಪೋನ್ ಕದ್ದಾಲಿಕೆಯ ನಿಜಾಂಶ ಎಲ್ಲರಿಗೂ ಕೂಡ ತಿಳಿಯಲಿದೆ.

Edited By

Manjula M

Reported By

Manjula M

Comments