ಬಿಜೆಪಿ ನಾಯಕರ ವಿರುದ್ಧ ಸಿಡಿದೆದ್ದ ಅನರ್ಹ ಶಾಸಕರು..! ಅನರ್ಹ ಶಾಸಕರ ಮುಂದಿನ ನಡೆಯೇನು ಗೊತ್ತಾ..?

19 Aug 2019 4:19 PM | Politics
1202 Report

ದೋಸ್ತಿಗಳಿಗೆ ಕೈಕೊಟ್ಟ ಅತೃಪ್ತರ ಸ್ಥಿತಿ ಸದ್ಯ ಅತಂತ್ರವಾಗಿದೆ..  ದೋಸ್ತಿ ಸರ್ಕಾರ ಪತನವಾಗುವುದಕ್ಕೆ ಇವರೇ ಕಾರಣ.. ಅತೃಪ್ತ ಶಾಸಕರು ಸದ್ಯ ಅನರ್ಹರಾಗಿದ್ದಾರೆ… ಸದ್ಯ ಅತೃಪ್ತ ಶಾಸಕರು ಅತಂತ್ರ ಸ್ಥಿತಿಯಲ್ಲಿದ್ದಾರೆ… ಬಿಜೆಪಿಯನ್ನು ನಂಬಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಸೇರಿಕೊಂಡಿದ್ದ ಅತೃಪ್ತ ಶಾಸಕರನ್ನು, ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಪಕ್ಷಾಂತರ ಕಾಯ್ದೆಯಡಿ ಅನರ್ಹಗೊಳಿಸಿದ್ದರು. ಇದೀಗ ಅತಂತ್ರ ಸ್ಥಿತಿಯಲ್ಲಿದ್ದಾರೆ…

ಇದೀಗ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.. ಅದು ಬಗೆ ಅರಿಯುರುವರೆಗೂ ಅವರು ಅತಂತ್ರದಲ್ಲಿಯೇ ಇರುತ್ತಾರೆ.. . ಇನ್ನು ಮಂತ್ರಿ ಹುದ್ದೆ ನೀಡುವುದಾಗಿ ಬಿಗ್ ಆಫರ್ ನೀಡಿದ್ದ ಬಿಜೆಪಿ ನಾಯಕರು ಇದೀಗ ಅನರ್ಹ ಶಾಸಕರ ಕಡೆ ಗಮನ ಕೊಡದೆ, ಸಚಿವ ಸಂಪುಟ ವಿಸ್ತರಣೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ಆಕ್ರೋಶಗೊಂಡಿರುವ ಅನರ್ಹ ಶಾಸಕರು ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದ್ದಾರೆ. ಬಿಜೆಪಿ ನಾಯಕರ ನಡೆಯಿಂದ ತೀವ್ರ ಬೇಸತ್ತಿರುವ ಅನರ್ಹ ಶಾಸಕರು ತಮ್ಮ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ದೋಸ್ತಿಗಳಿಗೆ ಅನರ್ಹ ಶಾಸಕರು ಬಿಗ್ ಶಾಕ್ ಕೊಟ್ಟರೆ, ಬಿಜೆಪಿ ನಾಯಕರು ಅನರ್ಹ ಶಾಸಕರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.

Edited By

Manjula M

Reported By

Manjula M

Comments