16 ಸಚಿವರು ಸೋಮವಾರವೇ ಪ್ರಮಾಣವಚನ…!!

17 Aug 2019 3:30 PM | Politics
880 Report

ಬಿಎಸ್ ವೈ ಸರ್ಕಾರ ರಚನೆಯಾದರೂ ಕೂಡ ಇನ್ನೂ ಸಚಿವ ಸಂಪುಟ ವಿಸ್ತರಣೆಯಾಗಿಲ್ಲ..ಪಕ್ಷದಲ್ಲಿ ಸಾಕಷ್ಟು ಜನರು ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿದ್ದಾರೆ.. ನೂತನ ಮುಖ್ಯಮಂತ್ರಿಗಳಾಗಿ ಬಿ.ಎಸ್. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದರೂ ಕೂಡ ಇನ್ನೂ ಇದುವರೆಗೂ ಸಚಿವ ಸಂಪುಟ ವಿಸ್ತರಣೆ ಸಾಧ್ಯವಾಗಿರಲಿಲ್ಲ.  ಈ ವಿಷಯ ವಿರೋಧ ಪಕ್ಷಗಳಿಗೆ ಬಾಯಿಗೆ ಆಹಾರವಾಗಿದ್ದಂತೂ ಸುಳ್ಳಲ್ಲ..

ಇದೆಲ್ಲಾದರ  ನಡೆವೆ ಕೊನೆಗೂ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ 19ರಂದು ಸಂಪುಟ ರಚನೆಯಾಗಲು ಮುಹೂರ್ತ ಫಿಕ್ಸ್ ಆಗಿದೆ.. ಈಗಾಗಲೇ ನೂತನ ಸಚಿವರ ಪಟ್ಟಿಗೆ ಬಿಜೆಪಿ ಹೈ ಕಮಾಂಡ್ ಗ್ರೀನ್  ಸಿಗ್ನಲ್ ನೀಡಿದೆ….16 ಶಾಸಕರು ಸಚಿವರಾಗುವುದು ಫಿಕ್ಸ್ ಎನ್ನಲಾಗಿದ್ದು, ಸೋಮವಾರ 12 ಗಂಟೆಗೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ಎಲ್. ಸಂತೋಷ್ ರಿಂದ ಸಚಿವರ ಪಟ್ಟಿಗೆ ಫೈನಲ್ ಟಚ್ ನೀಡಲಾಗಿದೆ ಎನ್ನಲಾಗುತ್ತಿದೆ.. ಸೋಮವಾರ ಯಾರಿಗೆ ಯಾವ ಸ್ಥಾನ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.. ರಾಜಕೀಯ ವಲಯದಲ್ಲಿ ಇನ್ನೂ ಯಾವೆಲ್ಲಾ ರೀತಿಯ ಬದಲಾವಣೆಗಳು ಆಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ

Edited By

Manjula M

Reported By

Manjula M

Comments