ಉಲ್ಟಾಪಲ್ಟಾ ಆಯ್ತಾ ಸಿಎಂ BSY ಲೆಕ್ಕಾಚಾರ..!!

13 Aug 2019 3:36 PM | Politics
2563 Report

ಸದ್ಯ ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಿಂದಾಗಿ ಜನ ಜೀವನ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ... ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತ ವ್ಯಸ್ತಗೊಂಡಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ನೆರೆ ಹಾಗೂ ಭಾರಿ ಮಳೆ ಉಂಟಾಗಿದೆ.. ಅದರಲ್ಲಿಯೂ, ಗ್ರಾಮಾಂತರ ಪ್ರದೇಶದ ಜನರ ಪರಿಸ್ಥಿತಿಯಂತೂ ನಿಜಕ್ಕೂ ಶೋಚನೀಯವಾಗಿ ಬಿಟ್ಟಿದೆ.. . ಅನೇಕ ಗ್ರಾಮಗಳು ಜಲಾವೃತಗೊಂಡಿದೆ.ಇದರಿಂದ ಸಾಕಷ್ಟು ಜನರು ಬದುಕು ಅತಂತ್ರ ಸ್ಥಿತಿಗೆ ತಲುಪಿದೆ..

ಸದ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ದೋಸ್ತಿ ಸರ್ಕಾರ ಪತನವಾದ ಮೇಲೆ ಬಿಜೆಪಿ ಪಕ್ಷವು ಸಾಕಷ್ಟು ಯೋಜನೆಗಳನ್ನು ರೂಪಿಸಬೇಕು ಎಂಬ ನಿಲುವನ್ನು ಇಟ್ಟುಕೊಂಡಿದ್ದರು.. ಆದರೆ ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆ ಹೊಸ ಬಜೆಟ್ ಮಂಡಿಸಿ  ಜನ ಸಾಮಾನ್ಯರಿಗೆ ಉಪಯೋಗವಾಗುವಂತಹ  ಯೋಜನೆ ಘೋಷಿಸುವ ಆಶಯ ಹೊಂದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರಿಗೆ ಅನಿರೀಕ್ಷಿತವಾಗಿ ಬಂದ ಅತಿವೃಷ್ಟಿ ಆಘಾತ ತಂದಿದ್ದು ಸದ್ಯ ಅವರ ಲೆಕ್ಕಾಚಾರಗಳನ್ನೆಲ್ಲ ಉಲ್ಟಾಪಲ್ಟಾ ಮಾಡಿದೆ ಎನ್ನಲಾಗಿದೆ. ರಾಜ್ಯದಲ್ಲಿ ಪ್ರವಾಹ ಹೆಚ್ಚಾಗಿ ಜನ ಸಾಮಾನ್ಯರು ಪರದಾಡುವಂತಾಗಿದೆ..

Edited By

Manjula M

Reported By

Manjula M

Comments