ಮತ್ತೆ ಆಪರೇಷನ್ ಕಮಲ..!! ಸಿಎಂ BSY ಮನೆಗೆ ಜೆಡಿಎಸ್ ಪ್ರಭಾವಿ ಶಾಸಕ..!!

13 Aug 2019 10:39 AM | Politics
4746 Report

ಸದ್ಯ ರಾಜಕೀಯದ ಪರಿಸ್ಥಿತಿಯು ತುಂಬಾ ಜಠಿಲ ಸ್ಥಿತಿಯಲ್ಲಿದೆ.. ದೋಸ್ತಿ ಸರ್ಕಾರ ಪತನಗೊಂಡು  ಬಿಜೆಪಿ ನಾಯಕರು ತಮ್ಮ ಅಧಿಕಾರವನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ದೋಸ್ತಿಗಳ ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟಿದ್ದೆ ಇಷ್ಟೆಕ್ಕೆಲ್ಲಾ ಮೂಲ ಕಾರಣ ಎನ್ನಬಹುದು..  ಸುಮಾರು 17 ಶಾಸಕರ ರಾಜೀನಾಮೆಯಿಂದಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿಯ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ.

ದೋಸ್ತಿ ಶಾಸಕರುಗಳ ರಾಜೀನಾಮೆ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ ಎಂಬ ಮಾತುಗಳು ಕೇಳಿ ಬರುತ್ತಿರುವಾಗಲೇ ಇದೀಗ ಮತ್ತೊಂದು ಸುತ್ತಿನ 'ಆಪರೇಷನ್ ಕಮಲ' ನಡೆಯಲಿದೆಯಾ ಎಂಬ ಅನುಮಾನ ಇದೀಗ ರಾಜಕೀಯ ವಲಯದಲ್ಲಿ ಬಾರೀ ಚರ್ಚೆಯಾಗುತ್ತಿದೆ.  ಸೋಮವಾರದಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ, ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪನವರ ಧವಳಗಿರಿ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗ ಅನರ್ಹಗೊಂಡಿರುವ ಹೆಚ್. ವಿಶ್ವನಾಥ್ ಹಾಗೂ ಎಸ್ ಟಿ ಸೋಮಶೇಖರ್ ಈ ಭೇಟಿ ಸಂದರ್ಭದಲ್ಲಿ ಜಿ.ಟಿ. ದೇವೇಗೌಡರಿಗೆ ಸಾಥ್ ನೀಡಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನ ಮತ್ತಷ್ಟು ಶಾಸಕರು ಪಕ್ಷಗಳನ್ನು ಬಿಟ್ಟರೆ ಬಿಜೆಪಿಗೆ ಮತ್ತಷ್ಟು ಬಲ ಬರಲಿದೆ. ಜೆಡಿಎಸ್ ಶಾಸಕ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವ ಹಿನ್ನಲೆಯಲ್ಲು ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಗೆ ಕಾರಣವಾಗಿದೆ ಎನ್ನಬಹುದು

Edited By

Manjula M

Reported By

Manjula M

Comments