ರಾಜ್ಯ ರಾಜಕೀಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಸಿಡಿಸಿದ್ರಾ ಹೊಸ ಬಾಂಬ್..!! ಖಜಾನೆಯಲ್ಲಿ ಎಷ್ಟು ಹಣ ಇಟ್ಟಿದ್ದಾರಂತೆ ಗೊತ್ತಾ..?
ಸದ್ಯ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.. ಎಲ್ಲ ವಿಷಯಗಳಿಗೂ ರಾಜಕೀಯವನ್ನು ತಳುಕು ಹಾಕುತ್ತಾರೆ.. ಪರ ವಿರೋಧ ಪಕ್ಷಗಳು ಒಬ್ಬರ ಮೇಲೋಬ್ಬರು ಆರೋಪ ಮತ್ತು ಪ್ರತ್ಯಾರೋಪಗಳು ಮಾಡುತ್ತಾ ರಾಜಕೀಯವನ್ನು ದೊಂಬರಾಟ ಮಾಡುತ್ತಿದ್ದಾರೆ.. ಇದೀಗ ಉತ್ತರ ಕರ್ನಾಟಕದಲ್ಲಿ ಪ್ರವಾಹ ಹೆಚ್ಚಾಗಿ ಸಾಕಷ್ಟು ಕುಟುಂಬಗಳು ಬೀದಿ ಪಾಲಾಗಿವೆ..
ಇದೀಗ ಇದೇ ಸಮಯದಲ್ಲಿ ನಾನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಖಜಾನೆಯಲ್ಲಿ ಸುಮಾರು 8,000 ಕೋಟಿ ರೂ. ಇಟ್ಟು ಬಂದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಕುಮಾರಸ್ವಾಮಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಅಧಿಕಾರದಿಂದ ಕೆಳಗಿಳಿಯುವ ಸಂದರ್ಭದಲ್ಲಿ ಸರಕಾರದ ಖಜಾನೆಯಲ್ಲಿ 6ರಿಂದ 8 ಸಾವಿರ ಕೋಟಿ ರೂ. ಇಟ್ಟು ಬಂದಿದ್ದೇನೆ. ಸಿಎಂ ಯಡಿಯೂರಪ್ಪ ಅವರು ರಾಜಕೀಯ ಬೆರೆಸದೆ ಜನರ ಸಮಸ್ಯೆಗೆ ಹಣ ಬಳಸಲಿ ಎಂದು ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಹಣದ ಕೊರತೆಯಿಲ್ಲ. ಸರಿಯಾಗಿ ಕೆಲಸ ಮಾಡಬೇಕು ಅಷ್ಟೇ. ಯಡಿಯೂರಪ್ಪ ಶ್ರಮಪಟ್ಟು ಮುಖ್ಯಮಂತ್ರಿಯಾಗಿದ್ದಾರೆ. ನೆರೆ ಪರಿಹಾರ ಅವರಿಗೆ ಒಂದು ಸವಾಲಾಗಿದೆ. ಅದನ್ನು ಸೂಕ್ತವಾಗಿ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅವರಿಗೆ ಪರಿಹಾರವನ್ನು ನೀಡಬೇಕು.. ಖಜಾನೆಯಲ್ಲಿ 8000 ಕೋಟಿ ಹಣವನ್ನು ಇಟ್ಟಿದ್ದೇನೆ.. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಕುಮಾರಸ್ವಾಮಿಯವರು ತಿಳಿಸಿದ್ದಾರೆ.
Comments