ಕಾಂಗ್ರೆಸ್ ಅನರ್ಹ ಶಾಸಕನಿಗೆ ಶುರುವಾಯ್ತು ಮತ್ತೊಂದು ಕಂಟಕ..!

03 Aug 2019 10:39 AM | Politics
1043 Report

ದೋಸ್ತಿ ಸರ್ಕಾರ ಪತನವಾಗುವುದಕ್ಕೆ ಅತೃಪ್ತ ಶಾಸಕರೇ ಕಾರಣ.. ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟ ಹಿನ್ನಲೆಯಲ್ಲಿಯೇ ಮೈತ್ರಿ ಸರ್ಕಾರದ ಗತಿ ಹೀಗಾಗಿದೆ..  ದೋಸ್ತಿಗಳ ವಿರುದ್ಧ ಸಿಟ್ಟಿಗೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನಗೆ ಅನರ್ಹತೆ ಶಾಕ್ ಬೆನ್ನಲ್ಲೇ ಇದೀಗ ಅವರಿಗೆ ಮತ್ತೊಂದು ಕಂಟಕ ಶುರುವಾಗಿದೆ ಎನ್ನಲಾಗುತ್ತಿದೆ..

ಈ ಮೊದಲೇ ಮುನಿರತ್ನ ವಿರುದ್ದ ದೂರು ದಾಖಲಾಗಿದೆ.. ರಾಜರಾಜೇಶ್ವರಿ ನಗರ ವಿಧಾನಸಭಾ ಚುನಾವಣೆಯಲ್ಲಿ ನಕಲಿ ವೋಟರ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುನಿರತ್ನ ವಿರುದ್ಧ ಪ್ರಕರಣ ದಾಖಲಾಗಿದೆ.2018ರಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ರಾಜರಾಜೇಶ್ವರಿ ನಗರದಲ್ಲಿ ಸಾಕಷ್ಟು ನಕಲಿ ವೋಟರ್ ಪತ್ತೆಯಾಗಿದ್ದವು. ಹಾಗಾಗಿ ಈ ಕ್ಷೇತ್ರದ ಚುನಾವಣೆಯನ್ನೇ ಮುಂದೂಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 34 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದ್ದು, ಮುನಿರತ್ನ ಅವರ ಹೆಸರನ್ನೂ ಕೂಡ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಜಾಲಹಳ್ಳಿ ಪೊಲೀಸರು ಚಾರ್ಜ್ ಶೀಟ್ ನ್ನು 7 ನೇ ಎಸಿಎಮ್‌ಎಮ್ ಕೋರ್ಟ್ ಗೆ ಸಲ್ಲಿಕೆ ಮಾಡಿದ್ದು, ಇದರಲ್ಲಿ ಮುನಿರತ್ನ ಅವರನ್ನು ಎ-1 ಆರೋಪಿ ಎಂದು ಹೆಸರಿಸಲಾಗಿದೆ. ಸದ್ಯ ಈ ವಿಚಾರ ಮುನಿರತ್ನಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ದೋಸ್ತಿಗೆ ಕೈ ಕೊಟ್ಟು ಅನರ್ಹ ಶಿಕ್ಷೆಯನ್ನು ಅನುಭವಿಸುತ್ತಿರುವ ಮುನಿರತ್ನಗೆ ಇದೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.. ಆಗಸ್ಟ್ 9 ಕ್ಕೆ ಅವರ ಸಿನಿಮಾ ಕುರುಕ್ಷೇತ್ರ ಕೂಡ ಬಿಡುಗಡೆಗೆ ಸಿದ್ದವಾಗಿದೆ.. ಒಟ್ಟಿನಲ್ಲಿ ರಾಜಕೀಯ ಎಂಬುದು ಸದ್ಯ ಸ್ಪಷ್ಟ ಚಿತ್ರಣ ಸಿಗದಂತೆ ಆಗಿದೆ.. ಇವುಗಳಿಂದಲ್ಲೆ ಮುನಿರತ್ನ ಅವರು ಹೊರಗೆ ನಿರಾಳ ಆಗ್ತಾರ ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments