ವಿಧಾನಸಭಾ ಮರು ಚುನಾವಣೆ..! ಮತ್ತೆ ನಿಖಿಲ್‌ V/S ಸುಮಲತಾ..!! ಅಖಾಡ ಯಾವುದು ಗೊತ್ತಾ..?

02 Aug 2019 12:01 PM | Politics
11015 Report

ರಾಜ್ಯ ರಾಜಕಾರಣದಲ್ಲಿ ಸದ್ಯ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.. ರಾಜ್ಯದಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಮರು ಚುನಾವಣೆ ಇನ್ನೂ ಕೆಲವೇ ದಿನಗಳಲ್ಲಿ ನಡೆಯಲಿದೆ. ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳು ಯಾರನ್ನು ಪಕ್ಷದಿಂದ ಅಖಾಡಕ್ಕೆ ಇಳಿಸಬೇಕು ಎಂಬ ಚಿಂತನೆಯಲ್ಲಿವೆ.. ಹೀಗಿರುವಾಗಲೇ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿಯವರನ್ನು ಅಖಾಡಕ್ಕೆ ಇಳಿಸಬೇಕು ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ..

ಹೌದು.. ಜೆಡಿಎಸ್‌ನಿಂದ ನಿಖಿಲ್‌ ಕುಮಾರಸ್ವಾಮಿಯರನ್ನು ಅಖಾಡಕ್ಕೆ ಇಳಿಸುವಂತೆ ಸ್ಥಳೀಯ ಜೆಡಿಎಸ್‌ ನಾಯಕರುಗಳು ಮಾಜಿ ಪಿ.ಎಂ ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿಯವರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ..  ಅಷ್ಟೆ ಅಲ್ಲದೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಕ್ಷೇತ್ರದ ನಾರಾಯಣಗೌಡ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಹೀಗಾಗಿ ಈ ಕ್ಷೇತ್ರಕ್ಕೆ ನಡೆಯಲಿರುವ ಉಪಚುನವಾವಣೆಯಲ್ಲಿ ನಿಖಿಲ್ ಅವರಿಗೆ ಅವಕಾಶ ನೀಡಬೇಕು ಎನ್ನಲಾಗುತ್ತಿದೆ. ಇನ್ನು ನಿಖಿಲ್‌ ಕುಮಾರಸ್ವಾಮಿ ಕಣಕ್ಕೆ ಇಳಿಯುವ ಬಗ್ಗೆ ಈಗಾಗಲೇ ಜೆಡಿಎಸ್‌ ನಾಯಕರುಗಳ ಅಂಗಳವನ್ನು ತಲುಪಿದ್ದು, ಈ ಬಗ್ಗೆ ಇನ್ನಷ್ಟೆ ಅಧಿಕೃತ ಸ್ಪಷ್ಟ ಸಂದೇಶ ಬರಬೇಕಾಗಿದೆ.ಇದೆಲ್ಲದರ ನಡುವೆ ಸುಮಲತಾ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿ, ಕೆ.ಆರ್. ಪೇಟೆಯಿಂದ ಅಖಾಡಕ್ಕೆ ಇಳಿಯುವಂತೆ  ಬಿಜೆಪಿ ಕೂಡ ಕೇಳಿಕೊಳ್ಳಲಿದೆ ಎಂದು ಹೇಳಿಕೊಳ್ಳುತ್ತಿದೆ.. ಒಂದು ವೇಳೆ ಈ ರೀತಿಯಾದರೆ ಮತ್ತೊಮ್ಮೆ ನಿಖಿಲ್ ಮತ್ತು ಸುಮಲತಾ ನಡುವೆ ಪೈಪೋಟಿ ನಡೆಯುವುದಂತೂ ಸುಳ್ಳಲ್ಲ.. ಮುಂದೆ ಯಾವ ರೀತಿಯ ಸನ್ನಿವೇಶಗಳು ಎದುರಾಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

 

Edited By

Manjula M

Reported By

Manjula M

Comments