ದೋಸ್ತಿಗಳಿಗೆ ಬಿಗ್ ಶಾಕ್ ..!! CM BSY ಮುಂದಿನ ನಡೆ ಏನ್ ಗೊತ್ತಾ..?

02 Aug 2019 9:24 AM | Politics
2438 Report

ಇತ್ತಿಚಿಗೆ ದೋಸ್ತಿ ಸರ್ಕಾರವು ಪತನಗೊಂಡ ಮೇಲೆ ಬಿಜೆಪಿ ಸರ್ಕಾರ ಅಧಿಕಾರಕ್ಜೆ ಬಂದಿದೆ.. ಈ ನಿಟ್ಟಿನಲ್ಲಿಯೇ ಜನರ ಮನಸನ್ನು ಗೆಲ್ಲಲು ಬಿಜೆಪಿ ಸರ್ಕಾರ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ..ಈಗಾಗಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೇ ಬರುತ್ತಲೆ ದೋಸ್ತಿಗಳಿಗೆ ಶಾಕ್ ನೀಡಿದೆ…  ಅತೃಪ್ತ ಶಾಸಕರು ದೋಸ್ತಿಗೆ ಕೈ ಕೊಟ್ಟ ಮೇಲೆ ಅವರನ್ನು ಅನರ್ಹ ಮಾಡಲಾಗಿತ್ತು… ಇದೀಗ ಮೈತ್ರಿ ಸರ್ಕಾರದಲ್ಲಿ ನಡೆದಿದೆ ಎನ್ನಲಾಗಿದ್ದ ಎಲ್ಲಾ ರೀತಿಯ ರಾಜಕೀಯ ನೇಮಕಾತಿಗಳನ್ನು  ಬಿಎಸ್ ಯಡಿಯೂರಪ್ಪ ಸರ್ಕಾರ ರದ್ದು ಮಾಡಿದೆ ಎನ್ನಲಾಗುತ್ತಿದೆ.

ಮೈತ್ರಿ ಸರ್ಕಾರದಲ್ಲಿ ನೇಮಿಸಿದ್ದ ಹಲವು ಪ್ರಮುಖ ಹುದ್ದೆಗಳ ನೇಮಕಾತಿಯನ್ನು ಸಿಎಂ ಬಿಎಸ್ ಯಡಿಯೂರಪ್ಪ ರದ್ದು ಮಾಡಿದ್ದು, ಪ್ರಮುಖವಾಗಿ ಕೃಷಿ ಉತ್ಪನ್ನ ಮಾರುಕಟ್ಟೆಯ ವಿವಿಧ ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳ ಸದಸ್ಯತ್ವವನ್ನು ರದ್ದುಪಡಿಸಿ ಸರ್ಕಾರ ಆದೇಶವನ್ನು ಹೊರಡಿಸಿದೆ. ರಾಜ್ಯಾದ್ಯಂತ ಸಾವಿರಾರು ಎಪಿಎಂಪಿಗಳಿಗೆ ಇತ್ತೀಚಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳನ್ನು ಮೈತ್ರಿ ಸರ್ಕಾರ ನೇಮಕಗೊಳಿಸಿ ಆದೇಶಿಸಿತ್ತು. ಆದರೆ ದಿಢೀರ್ ರಾಜ್ಯ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ನೇಮಕಗೊಳಿಸಿದ್ದ ವಿವಿಧ ಸಮಿತಿಗಳ ಪದಾಧಿಕಾರಿಗಳಿಗೆ ಕೋಕ್ ನೀಡಿದೆ. ರಾಜಕೀಯ ನೇಮಕಾತಿಗಳನ್ನು ರದ್ದುಗೊಳಿಸಿ ಸಿಎಂ ಬಿಎಸ್ ಯಡಿಯೂರಪ್ಪ ದೋಸ್ತಿಗಳಿಗೆ ಶಾಕ್ ನೀಡಿದ್ದಾರೆ.ಇನ್ನೂ ಮುಂದೆ ರಾಜಕೀಯದಲ್ಲಿ ಯಾವ ರೀತಿ ಬದಲಾವಣೆಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments