ಬಿಎಸ್ವೈ ಸಂಪುಟ ರಚನೆಯಲ್ಲಿ ಯಾರಿಗೆಲ್ಲಾ ಸಚಿವ ಸ್ಥಾನ ಸಿಗಲಿದೆ ಗೊತ್ತಾ...?

01 Aug 2019 3:03 PM | Politics
1487 Report

 ಸದ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸುತ್ತಿವೆ.. ಇದೀಗ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದು ಆಗಿದೆ.. ಇದೀಗ ಯಡಿಯೂರಪ್ಪ ಅವರಿಗೆ ಸಂಪುಟ ರಚನೆ ಸಂಕಟ ಶುರುವಾಗಿರುವ ಆಗಿದೆ.. ದೋಸ್ತಿ ಸರ್ಕಾರವಿದ್ದಾಗಲೂ ಕೂಡ ಕುಮಾರಸ್ವಾಮಿಯವರಿಗೂ ಕೂಡ ಇದೇ ರೀತಿಯ ಸಮಸ್ಯೆಯು ಎದುರಾಗಿತ್ತು.. ಆದರೆ ಇದೀಗ ಯಡಿಯೂರಪ್ಪ ಅವರಿಗೂ ಕೂಡ ಇದೇ ಸಮಸ್ಯೆ ಎದುರಾಗಿದೆ. ಇದಕ್ಕಾಗಿಯೇ ಸಿಎಂ ಯಡಿಯೂರಪ್ಪ ಹೊಸ ಫ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಇನ್ನೂ 6 ದಿನಗಳು ಕಳೆದಿವೆ ಅಷ್ಟೆ. ಅದಾಗಲೇ ಮಂತ್ರಿಗಿರಿಗಾಗಿ, ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಡುತ್ತಲೆ ಇದ್ದಾರೆ.. ಆದರೆ ಇದೆಲ್ಲದರ ನಡುವೆ  ಸಚಿವ ಸ್ಥಾನ ನೀಡದಿದ್ದರೇ, ಕೆಲ ಹಿರಿಯ ಬಿಜೆಪಿಯ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇವೆ ಎಂದು  ಯಡಿಯೂರಪ್ಪ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.. ಈ ಮಧ್ಯೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ತಮಗೆ ಸಚಿವ ಸ್ಥಾನವನ್ನು ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.. ಆಗಸ್ಟ್ 4 ಅಥವಾ 5ಕ್ಕೆ ದೆಹಲಿಗೆ ತೆರಳಲಿ, ಹೈಕಮಾಂಡ್ ಮುಂದಿರಿಸಿ ಪಟ್ಟಿಗೆ ಅಂಕಿತ ಹಾಕಿಸಿಕೊಂಡು ಬರಲಿದ್ದಾರೆ ಎನ್ನಲಾಗಿದೆ. ಸಂಪುಟ ರಚನೆಯ ಪಟ್ಟಿಯಲ್ಲಿ ಐವರು ಲಿಂಗಾಯತರು, ಮೂವರು ಒಕ್ಕಲಿಗ ಶಾಸಕರಿಗೆ ಬಿಎಸ್ ವೈ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ. ಇವರೊಂದಿಗೆ, ಎಸ್ ಟಿ, ದಲಿತ, ಕುರುಬ, ಪಕ್ಷೇತರರಿಗೆ ಒಂದೊಂದು ಖಾತೆಗಳ ಹಂಚಿಕೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಸ್ಥಾನ ಸಿಗುತ್ತದೆಯೋ, ಸಚಿವ ಸ್ಥಾನ ಸಿಗದೇ ಇರುವವರು ಏನು ಮಾಡುತ್ತಾರೋ ಗೊತ್ತಿಲ್ಲ.. ರಾಜಕೀಯ ವಲಯದಲ್ಲಿ ಮತ್ತೆ ಯಾವೆಲ್ಲಾ ರೀತಿಯ ಬೆಳವಣಿಗೆಗಳು ಆಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

 

Edited By

Manjula M

Reported By

Manjula M

Comments