ವಿಧಾನಸಭೆ ಕಲಾಪಕ್ಕೆ ತಡವಾಗಿ ಬಂದ CM HDK..!! ಕಾರಣವೇನು ಗೊತ್ತಾ..?  

23 Jul 2019 5:50 PM | Politics
917 Report

ದೋಸ್ತಿ ನಾಯಕರ ವಿಶ್ವಾಸಮತ ಯಾಚನೆಗೆ ಇನ್ನೂ ಕೆಲವೇ ನಿಮಿಷಗಳು ಬಾಕಿಯಿವೆಯಷ್ಟೆ. ಕಳೆದ ಗುರುವಾರದಿಂದಲೂ ವಿಶ್ವಾಸಮತ ಯಾಚನೆ ಮಾಡಬೇಕು ಎಂಬ ಹರಸಾಹಸ ನಡೆಯುತ್ತಲೇ ಇದೆ.. ಆದರೂ ಕೂಡ ಈವರೆಗೂ ಅದು ಸಾಧ್ಯವಾಗಲಿಲ್ಲ.. ಇಂದು ಏನೇ ಆದರೂ ವಿಶ್ವಾಸಮತ ಯಾಚನೆ ಮಾಡಲೇ ಬೇಕು ಎಂದು ವಿಪಕ್ಷ ಪಟ್ಟು ಹಿಡಿದಿದೆ.. ಇದರ ನಡುವೆ ದೋಸ್ತಿಗಳಿಗೆ ಸದ್ಯ ಏನು ಮಾಡಬೇಕು ಎಂದು ತೋಚದೇ ಕೈ ಕಟ್ಟಿದಂತಾಗಿದೆ.

ಇದೀಗ ವಿಶ್ವಾಸಮತ ಮೇಲಿನ ಚರ್ಚೆ ಕೊನೆಗೊಳಿಸಲು ಹಾಗೂ ಬಹುಮತ ಸಾಬೀತು ಪಡಿಸಲು ಸ್ಪೀಕರ್ ಡೆಡ್ ಲೈನ್ ನೀಡಿದ್ದರೂ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಲಾಪಕ್ಕೆ ತಡವಾಗಿ ಆಗಮಿಸಿದ್ದರ ಕುರಿತು ಚರ್ಚೆಗಳು ಶುರುವಾಗಿವೆ. ವಿಧಾನಸಭೆಗೆ ಕುಮಾರಸ್ವಾಮಿ ನಾಲ್ಕೈದು ಗಂಟೆಗಳ ಕಾಲ ತಡವಾಗಿ ಬಂದರು.. . ಮಧ್ಹಾಹ್ನ 3 ಗಂಟೆಗೆ ವಿಧಾನಸಭೆ ಸಿಎಂ ಬಂದಿದ್ದಾರೆ. ಇಷ್ಟು ತಡವಾಗಿ ಬಂದಿದ್ದರ ರಹಸ್ಯ ಏನಿರಬಹುದು ಎಂಬುದು ಸದ್ಯ ಕುತೂಹಲ ಮೂಡಿಸಿದೆ..  ಬೆಳಗ್ಗೆಯಿಂದ ಹೋಟೆಲ್ ತಾಜ್ ವೆಸ್ಟೆಂಡ್ ನಲ್ಲಿದ್ದ ಸಿಎಂ, ರಾಜಕೀಯ ಲೆಕ್ಕಾಚಾರದಲ್ಲಿ ಮಗ್ನರಾಗಿದ್ರು. . ಅವರನ್ನ ಎಂ.ಬಿ.ಪಾಟೀಲ್, ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಬಂದಿದ್ದರು.  ಆ ಭೇಟಿಯಲ್ಲಿ ಏನಾಗಿದೆ, ರಾಜಕೀಯ ಮುಂದಿನ ನಡೆಯ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.. ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಪ್ರಮುಖರೊಂದಿಗೆ ಸಿಎಂ ಮುಂದಿನ ರಾಜಕೀಯ ನಡೆ ಹಾಗೂ ತೀರ್ಮಾನಗಳ ಬಗ್ಗೆ ಗಂಭೀರವಾಗಿ ಚರ್ಚೆಯಲ್ಲಿ ತೊಡಗಿದ್ದರು ಹಾಗಾಗಿ ಲೇಟಾಗಿ ಬಂದಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.  ಇಂದು ಸರ್ಕಾರ ಉಳಿಯುತ್ತೋ, ಇಲ್ಲವೋ ಗೊತ್ತಿಲ್ಲ..ಎಲ್ಲದಕ್ಕೂ ಇಂದು ಫುಲ್ ಸ್ಟಾಪ್ ಇಡುತ್ತಾರೆ ಎಂದು ಹೇಳಲಾಗುತ್ತಿದೆ.   

Edited By

Manjula M

Reported By

Manjula M

Comments