ವಿಶ್ವಾಸಮತಯಾಚನೆ ಮುಂದೂಡಲು `ಮಾಸ್ಟರ್ ಪ್ಲ್ಯಾನ್'..!? CM HDK ಮಾಡ್ತಿರೋದಾದ್ರು ಏನು..?

23 Jul 2019 1:51 PM | Politics
4385 Report

ರಾಜ್ಯ ರಾಜಕಾರಣವನ್ನು  ನೋಡಿ ಸದ್ಯ ಜನರಿಗೆ ಬೇಸತ್ತು ಹೋಗಿದೆ. ಯಾಕಾದ್ರೂ ವೋಟ್ ಹಾಕುದ್ವೋ ಅನ್ನೋ ರೀತಿ ಆಗಿರೋದು ಸುಳ್ಳಲ್ಲ.. ಜನರ ಸಮಸ್ಯೆಯನ್ನು ಕೇಳೋಕೆ ಟೈಮ್ ಇಲ್ಲ ಅನ್ನುವವರೂ ಈಗ ಅಧಿಕಾರಕ್ಕಾಗಿ ಗಂಟ ಗಂಟಲೇ ಮಾತನಾಡುತ್ತಿದ್ದಾರೆ.. ಇಂದು ಏನೇ ಆದರೂ ವಿಶ್ವಾಸ ಮತ ಯಾಚನೆ ಮುಗಿಸಲೇ ಬೇಕು ಎಂದು ಬಿಜೆಪಿಯವರು ಪಟ್ಟು ಹಿಡಿದಿದ್ದಾರೆ.

ಆದರೆ ವಿಶ್ವಾಸಮತಯಾಚನೆ ಮುಂದೂಡಲು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊಸ  ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಪೀಕರ್ ರಮೇಶ್ ಕುಮಾರ್ ಇಂದು ಸಂಜೆ 6 ಗಂಟೆಯೊಳಗೆ ವಿಶ್ವಾಸಮತಯಾಚನೆ ಮಾಡುವಂತೆ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಡೆಡ್ ಲೈನ್ ನೀಡಿದ್ದಾರೆ. ಆದರೆ ಸಿಎಂ ಹೆಚ್ಡಿಕೆ ಇದೀಗ ವಿಶ್ವಾಸಮತಯಾಚನೆ ಮುಂದೂಡಲು ಸಖತ್ ಆಗಿರೋ ಮಾಸ್ಟರ್ ಪ್ಲಾನ್ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.  ಸಿಎಂ ಕುಮಾರಸ್ವಾಮಿ ಅವರು ಸದನಕ್ಕೆ ಹಾಜರಾಗದೇ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿಯೇ ಉಳಿದಿಕೊಂಡಿದ್ದಾರೆ, ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸಿರುವ ಸಿಎಂ, ಅತೃಪ್ತ ಶಾಸಕರ ಅನರ್ಹತೆ ಅಸ್ತ್ರ ಪ್ರಯೋಗಿಸಲು ಸ್ಪೀಕರ್ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.. ಒಂಧು ವಾರದಿಂದ ಇದನ್ನೆಲ್ಲಾ ನೋಡಿ ನೋಡಿ ಎಲ್ಲರಿಗೂ ಕೂಡ ಸಾಕಾಗಿ ಹೋಗಿದೆ.. ಈ ನಾಟಕ ಇವತ್ತಿಗೆ ಕೊನೆಯಾಗುತ್ತೋ ಅಥವಾ ಇನ್ನೂ ಮುಂದುವರೆಯುತ್ತೋ ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments