ಅತೃಪ್ತ ಶಾಸಕರಿಗೆ ಡಿಕೆಶಿ ಕೊಟ್ರು ಖಡಕ್ ಎಚ್ಚರಿಕೆ..!!
ಕಳೆದ ಹದಿನೈದು ದಿನಗಳಿಂದ ರಾಜಕೀಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.. ದೋಸ್ತಿ ನಾಯಕರಲ್ಲಿನ ಅತೃಪ್ತ ಶಾಸಕರು ರಾಜೀನಾಮೆ ನೀಡಿ ಮುಂಬೈ ಸೇರಿಕೊಂಡಿದ್ದಾರೆ. ಅತೃಪ್ತ ಶಾಸಕರನ್ನು ಸೆಳೆಯುವಲ್ಲಿ ವಿಫಲರಾದ ದೋಸ್ತಿಗಳು ವಿಶ್ವಾಸಮತ ಯಾಚನೆ ಮಾಡಲು ಮುಂದಾದರು.. ಆದರೆ ಅತೃಪ್ತ ಶಾಸಕರು ಮುಂಬೈನಲ್ಲಿ ಬೀಡು ಬಿಟ್ಟಿರುವ ಕಾರಣ ಅವರನ್ನು ಕರೆ ತರುವ ಪ್ರಯತ್ನ ಮಾಡುತ್ತಿದೆ.. ಇದೀಗೆ ಅತೃಪ್ತ ಶಾಸಕರಿಗೆ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೋಗಿರುವ ಅತೃಪ್ತ ಶಾಸಕರು ಇಂದು ಬೆಳಗ್ಗೆ 11 ಗಂಟೆಗೆ ಸ್ಪೀಕರ್ ರಮೇಶ್ ಕುಮಾರ್ ಎದುರು ಹಾಜರಾಗಬೇಕು. ಇಲ್ಲದಿದ್ದರೆ ಮಂಗಳವಾರ ಸಂಜೆ ವೇಳೆಗೆ ಅನರ್ಹರಾಗುತ್ತೀರಿ ಎಂದು ಅತೃಪ್ತ ಶಾಸಕರಿಗೆ ಡಿ.ಕೆ.ಶಿವಕುಮಾರ್ ಖಡಕ್ ವಾರ್ನಿಂಗ್ ಅನ್ನು ಕೊಟ್ಟಿದ್ದಾರೆ. ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರಿಗೆ ವಿಪ್ ಜಾರಿ ಮಾಡಬಹುದಾಗಿದೆ. ಹಾಗಾಗಿ ವಿಪ್ ಜಾರಿ ಮಾಡುವಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಿಗೆ ಸ್ಪೀಕರ್ ರಮೇಶ್ ಕುಮಾರ್ ಮನವಿ ಮಾಡಿದ್ದಾರೆ ಎಂದು ಹೇಳಿದರು.ಒಂದು ವೇಳೆ ಸಂವಿಧಾನದ ಪ್ರಕಾರ ನೀವು ಅನರ್ಹಗೊಂಡಲ್ಲಿ ನೀವು ಆಯ್ಕೆಯಾಗುವ ವಿಧಾನಸಭೆಯ ಉಳಿದ ಅವಧಿಯವರೆಗೆ ಮತ್ತೆ ವಿಧಾನಸಭೆ ಅಥವಾ ವಿಧಾನಪರಿಷತ್ ಸದಸ್ಯರಾಗಲು ಸಾಧ್ಯವಾಗುವುದಿಲ್ಲ ಎಂದು ಡಿಕೆಶಿ ಅತೃಪ್ತರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಒಟ್ಟಾರೆಯಾಗಿ ಇಂದು ಸಂಜೆಯ ವೇಳೆಗೆ ಎಲ್ಲವನ್ನು ಸರಿ ಮಾಡಬೇಕು.. ಇನ್ನೂ ಎಷ್ಟು ದಿನ ಈ ರೀತಿಯ ಆಟವನ್ನು ಆಡಬೇಕು ಎಲ್ಲವೂ ಕೂಡ ಇವತ್ತೆ ಮುಗಿಯಬೇಕು ಎನ್ನಲಾಗುತ್ತಿದೆ.
Comments