ಸ್ಪೀಕರ್ ರಮೇಶ್ ಕುಮಾರ್’ರಿಂದ ನಾಲ್ವರು ಅತೃಪ್ತ ಶಾಸಕರಿಗೆ ನೋಟಿಸ್..!! ಯಾರ್ಯಾರಿಗೆ ಗೊತ್ತಾ..?
ಕಳೆದ ಹದಿನೈದು ದಿನಗಳಿಂದ ಅತೃಪ್ತ ಶಾಸಕರ ರಾಜೀನಾಮೆಯ ಆಟ ನಡೆಯುತ್ತಲೆ ಇದೆ… ಅತೃಪ್ತ ಶಾಸಕರನ್ನು ಮನವೊಲಿಸುವಲ್ಲಿ ಸೋತ ದೋಸ್ತಿ ನಾಯಕರು ವಿಶ್ವಾಸ ಮತಯಾಚನೆಯನ್ನು ಕೇಳಿದರು.. ಕಳೆದ ಗುರುವಾರದಿಂದಲೂ ಕೂಡ ವಿಶ್ವಾಸಮತ ಯಾಚನೆ ಮಾಡುತ್ತಲೇ ಇದ್ದಾರೆ.. ರಾಜ್ಯಪಾಲರ ಸಂದೇಶಕ್ಕೂ ಬನೆಲೆ ಕೊಡದ ದೋಸ್ತಿಗೆ ಇಂದು ಡೆಡ್ ಲೈನ್ ಕೊಟ್ಟಿದೆ.. ಇದೀಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿರುವ ನಾಲ್ವರು ಅತೃಪ್ತ ಶಾಸಕರಿಗೆ ಸ್ಪೀಕರ್ ರಮೇಶ್ ಕುಮಾರ್ ನೋಟಿಸ್ ನೀಡಿದ್ದಾರೆ..
ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್, ಮಹೇಶ್ ಕಮಟಳ್ಳಿ ಮತ್ತು ಆರ್. ಶಂಕರ್ ನಾಲ್ವರಿಗೆ ಸ್ಪೀಕರ್ ರಮೇಶ್ ಕುಮಾರ್ ನೋಟಿಸ್ ನೀಡಿದ್ದಾರೆ. ಪಕ್ಷಾಂತರ ನಿಷೇಧ ದೂರಿನ ಅರ್ಜಿ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ನೋಟಿಸ್ ಕೊಟ್ಟು ವಿವರಣೆ ನೀಡುವಂತೆ ಸೂಚಿಸಿದ್ದಾರೆ. ಅತೃಪ್ತ ಶಾಸಕರು ರಾಜ್ಯ, ತಮ್ಮ ಕ್ಷೇತ್ರವನ್ನು ಬಿಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮುಂಬೈಗೆ ಸೇರಿದ್ದಾರೆ. ಆದರೆ, ಇದುವರೆಗೂ ಯಾವೊಬ್ಬ ಶಾಸಕರು ರಾಜ್ಯಕ್ಕೆ ವಾಪಸ್ ಬಂದಿಲ್ಲ. ಸ್ಪೀಕರ್ ವಿವರಣೆ ನೀಡುವಂತೆ ಸೂಚಿಸಿದ್ದರೂ ಈ ಶಾಸಕರು ವಿಚಾರಣೆಗೆ ಹಾಜರಾಗುವುದು ಅನುಮಾನ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಅತೃಪ್ತ ಶಾಸಕರು ಸದನಕ್ಕೆ ಹಾಜರಾಗುವವರೆಗೂ ವಿಶ್ವಾಸಮತ ಯಾಚನೆ ಮಾಡಬಾರದು ಎಂದು ದೋಸ್ತಿಗಳು ನಿರ್ಧಾರ ಮಾಡಿದ್ದಾರೆ ಅನಿಸುತ್ತದೆ.. ಇಂದು ದೋಸ್ತಿ ಸರ್ಕಾರ ುಲಿಯುತ್ತಾ ಉರುಳುತ್ತಾ ಕಾದು ನೋಡ ಬೇಕಿದೆ.
Comments