ನೀವು ಸಾಚ ಆಗಿದ್ದರೇ ಅಧಿವೇಶನಕ್ಕೆ ಬನ್ನಿ ಎಂದ ಜೆಡಿಎಸ್ ಸಚಿವ..!!
ರಾಜ್ಯ ಸರ್ಕಾರವು ಏನು ಮಾಡಬೇಕು ಎಂದು ತೋಚದೆ ಸದ್ಯ ಅತಂತ್ರ ಪರಿಸ್ಥಿತಿಯಲ್ಲಿ ಇದೆ.. ಸೋಮವಾರ ವಿಶ್ವಾಸ ಮತ ಯಾಚನೆ ಮಾಡಲು ಡೆಡ್ ಲೈನ್ ನೀಡಿದ್ದಾರೆ.. ಅತೃಪ್ತ ಶಾಸಕರನ್ನು ಮನವೊಲಿಸಲು ದೋಸ್ತಿಗಳು ಪ್ರಯತ್ನ ಪಟ್ಟರು ಕೂಡ ವಿಫಲರಾದರು. ಈ ಹಿನ್ನಲೆಯಲ್ಲಿ ವಿಶ್ವಾಸಮತಯಾಚನೆ ಮಾಡಬೇಕಾದ ಸಂದರ್ಭ ಎದುರಾಗಿತ್ತು. ಹಾಗಾಗಿ ಗುರುವಾರ ವಿಶ್ವಾಸ ಮತಯಾಚನೆ ಮಾಡಲು ಮೂಹೂರ್ತ ಫಿಕ್ಸ್ ಆಗಿತ್ತು. ಆದರೆ ಗುರುವಾರದಿಂದ ಅದು ಶುಕ್ರವಾರಕ್ಕೆ ಶಿಫ್ಟ್ ಆಯಿತು.. ಇದೀಗ ಸೋಮವಾರಕ್ಕೆ ಮುಂದೂಡಿದ್ದಾರೆ.
ಸೋಮವಾರದ ಕಲಾಪವನ್ನು ಎಲ್ಲರು ಎದುರು ನೋಡುತ್ತಿದ್ದಾರೆ. ಅತೃಪ್ತ ಶಾಸಕರು ಕಲಾಪಕ್ಕೆ ಗೈರು ಆಗಿದ್ದಾರೆ. ಹೆಚ್ ವಿಶ್ವನಾಥ್ ಅವರನ್ನು ಜೆಡಿಎಸ್ ಗೆ ಕರೆತರುವ ವೇಳೆ ಹಲವರು ಸಾಕಷ್ಟು ಶಾಸಕರು ವಿರೋಧಿಸಿದ್ದರು. ಅವರ ವಿರೋಧದದ ನಡುವೆಯೂ ಜೆಡಿಎಸ್ ಗೆ ಕರೆತಂದೆ. ಆದರೇ ಪಕ್ಷನಿಷ್ಠರಾಗಿ ನಡೆದುಕೊಳ್ಳಬೇಕಿದ್ದ ವಿಶ್ವನಾಥ್ ಪಕ್ಷಕ್ಕೇ ನಿಷ್ಠರಾಗಿರದೇ ಇದೀಗ ಅತೃಪ್ತರ ಬಂಡಾಯ ಸೇರಿದ್ದಾರೆ. ನಿಮಗೆ ಪಕ್ಷದ ಋಣ ತೀರಿಸುವುದಿದ್ದರೇ ವಿಶ್ವಾಸಮತಕ್ಕೆ ಬನ್ನಿ. ಅಲ್ಲದೇ ನೀವು ಸಾಚ ಎನ್ನುವದಾದರೇ ಅಧಿವೇಶನಕ್ಕೆ ಬನ್ನಿ ಎಂದು ಸಚಿವ ಸಾರಾ ಮಹೇಶ್ ಎಚ್ ವಿಶ್ವನಾಥ್ ಸವಾಲ್ ಹಾಕಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್, ಹೆಚ್ ವಿಶ್ವನಾಥ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಕರೆತರುತ್ತಿರುವ ವೇಳೆ ಹಲವರು ವಿರೋಧಿಸಿದ್ದರು. ಆದರೂ ಲೆಕ್ಕಿಸದೇ, ಅವರ ವಿರೋಧದ ನಡುವೆಯೂ ಜೆಡಿಎಸ್ ಗೆ ಕರೆತಂದೆ ಎಂದರು..ಅದನ್ನು ಉಳಿಸಿಕೊಳ್ಳಬೇಕಿರುವುದು ಅವರ ಕರ್ತವ್ಯ.. ಪಕ್ಷಕ್ಕೆ ಅವರು ನಿಷ್ಟಾವಂತರಾಗಿಲ್ಲ ಎಂದು ಕಿಡಿಕಾರಿದರು.
Comments