ಜಾತ್ರೆಗೆ ಹೋಗ್ತೀನಿ ಎಂದು ಮುಂಬೈಗೆ ಹೊರಟ ಕೈ ಶಾಸಕ..!!

20 Jul 2019 10:40 AM | Politics
1888 Report

ನೆನ್ನೆಪೂರ್ತಿ ವಿಧಾನ ಸಭಾ ಕಲಾಪದಲ್ಲಿ ಆರೋಪ ಪ್ರತ್ಯಾರೋಪಗಳೇ ಕೇಳಿ ಬಂದವು.. ರಾಜ್ಯಪಾಲರು ಕೊಟ್ಟಿದ್ದ ಗಡುವು ಮುಗಿದರೂ ಕಲಾಪವನ್ನು ಸೋಮವಾರದವರೆಗೆ ಮುಂದೂಡಲಾಗಿದೆ. ಕಾಂಗ್ರೆಸ್​ನಲ್ಲೇ ಉಳಿಯಲು ನಿರ್ಧರಿಸಿದ್ದೇನೆ ಅಂತ ನಿನ್ನೆ ತಾನೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದ ಎಂಟಿಬಿ ನಾಗರಾಜ್​ ಅವರು ಇಂದು ಜಾತ್ರೆಗೆ ಹೋಗ್ತೀನಿ ಅಂತ ಹೇಳಿ ಮುಂಬೈಗೆ 'ಜೂಟ್‌' ಹೇಳಿದ್ದಾರೆ.  

ಬೆಂಗಳೂರಿನಲ್ಲಿರುವ ಎಚ್​ಎಎಲ್​ ವಿಮಾನ ನಿಲ್ದಾಣದಿಂದ ಚಾರ್ಟರ್​ ಫ್ಲೈಟ್​ನಲ್ಲಿ ಮುಂಬೈಗೆ ತೆರಳಿ ರೆನೈಸಾನ್ಸ್​ ಹೋಟೆಲ್​ನಲ್ಲಿರುವ 10 ಮಂದಿ ಅತೃಪ್ತ ಶಾಸಕರ ಗುಂಪಿಗೆ ಸೇರಿಕೊಂಡಿದ್ದಾರೆ.  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಸಂಧಾನಕ್ಕೆ ಒಪ್ಪಿದ್ದೇನೆ ಒಂದು ವೇಳೆ ಸುಧಾಕರ್​ ತಮ್ಮ ರಾಜೀನಾಮೆಯನ್ನು ವಾಪಸು ಪಡೆಯಲು ನಿರಾಕರಿಸಿದರೆ, ತಾವೊಬ್ಬರೇ ಕಾಂಗ್ರೆಸ್​ನಲ್ಲಿ ಉಳಿಯುವ ಮಾತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು.. . ಇನ್ನು ನಾಗರಾಜ್‌ ಇವರು ವಿಮಾನದಲ್ಲಿಯೇ ಮಾಜಿ ಡಿಸಿಎಂ ಆರ್‌ ಅಶೋಕ್ ಕೂಡ ಪ್ರಯಾಣ ಬೆಳಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಕೂಡ ಮುಂಬಯಿಗೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ದೋಸ್ತಿ ಸರಕಾರ ಬಹುಮತ ಪಡೆದುಕೊಳ್ಳುವಲ್ಲಿ ವಿಫಲವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.. ದೋಸ್ತಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡರೆ ಬಿಜೆಪಿ ಅಧಿಕಾರಕ್ಕೆ ಬರಲು ಕಾಯುತ್ತಿದ್ದಾರೆ. .

Edited By

Manjula M

Reported By

Manjula M

Comments