ರಾಜ್ಯದಲ್ಲಿ `ರಾಷ್ಟ್ರಪತಿ ಆಳ್ವಿಕೆ' ಬರುತ್ತಾ..!! ಹೀಗೆ ಹೇಳಿದ್ದು ಯಾರು..?

19 Jul 2019 1:57 PM | Politics
1698 Report

ರಾಜ್ಯದಲ್ಲಿ ಸದ್ಯ ಇಕ್ಕಟ್ಟಿನ ವಾತವರಣ ಸೃಷ್ಟಿಯಾಗಿದೆ. ರಾಜ್ಯಪಾಲರು ಕೊಟ್ಟಿದಂತಹ ಡೆಡ್ ಲೇನ್ ಸದ್ಯ ಮುಗಿದಿದೆ.. ಇಂದು 1.30ರೊಳಗೆ ವಿಶ್ವಾಸಮತ ಯಾಚನೆ ಮಾಡಬೇಕು ಎಂಬ ಸೂಚನೆಯನ್ನು ರಾಜ್ಯಪಾಲರು ನೀಡಿದ್ದರು.. ರಾಜ್ಯಪಾಲರ ಮಾತಿಗೂ ದೋಸ್ತಿ ಸರ್ಕಾರ ಕಿಮ್ಮತ್ತು ಕೂಡ ಬೆಲೆ ನೀಡಲಿಲ್ಲ…  ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿಯೇ ಕಾರಣ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬಂದರೆ ಸ್ವಾಗತ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಶಿವಲಿಂಗೇಗೌಡರು, ರಾಜ್ಯಪಾಲರು ಸದನದೊಳಗೆ ನಿಯಮಾವಳಿ ಪ್ರಕಾರ ನಡೆಯುವ ಕಲಾಪಗಲಿಗೆ ಸಂದೇಶ ನೀಡಬಹುದು. ಸಂದೇಶದ ಪ್ರಕಾರ ನಡೆದುಕೊಳ್ಳಿ ಎಂದು ಹೇಳಬಹುದೇ ಹೊರತು, ಹೀಗೆ ನಡೆದುಕೊಳ್ಳಲೇಬೇಕು ಎನ್ನುವಂತಿಲ್ಲ ಎಂದು ತಿಳಿಸಿದ್ದಾರೆ.  ಬಿಜೆಪಿಯವರು ರಾತ್ರೋರಾತ್ರಿ ನಮ್ಮ ಶಾಸಕರನ್ನು ಕರೆದುಕೊಂಡು ಹೋಗಿದ್ದಾರೆ.. ಸಿಎಂ ಕುರ್ಚಿಗಾಗಿ ಬಿಜೆಪಿಯವರು ಕಾತುರದಿಂದ ಕಾಯುತ್ತಿದ್ದಾರೆ. ಸಿಎಂ ಕುರ್ಚಿಗಾಗಿ ಬಿಜೆಪಿಯವರು ರಾಜ್ಯದಲ್ಲಿ ಅರಾಜಕತೆ ನಡೆಸುತ್ತಿದ್ದಾರೆ.. ಸಂವಿಧಾನದ ಬಿಕ್ಕಟ್ಟು ಸೃಷ್ಟಿಯಾಗಿರುವುದರಿಂದ ವಿಶ್ವಾಸ ಮತ ಯಾಚನೆ ವಿಳಂಬವಾಗುತ್ತಿದೆ ಎಂದು ತಿಳಿಸಿದರು.. ಒಂದು ವೇಳೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬಂದರೆ ನಾವುಗಳು ಅದನ್ನ ಸ್ವಾಗತಿಸುತ್ತೇವೆ ಎಂದರು. ರಾಷ್ಟ್ರಪತಿಯವರು ರಾಜ್ಯ ರಾಜಕೀಯದ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ ಯಾವ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments