ಸರ್ಕಾರವನ್ನು ಉಳಿಸಿಕೊಳ್ಳಲು ಕೊನೆಕ್ಷಣದಲ್ಲಿ ದೇವೆಗೌಡರ ಮಾಸ್ಟರ್ ಪ್ಲ್ಯಾನ್..!!

18 Jul 2019 2:00 PM | Politics
3186 Report

ಕಳೆದ ಒಂದು ವಾರದಿಂದ ಅತೃಪ್ತ ಶಾಸಕರ ರಾಜೀನಾಮೆ ಆಟ ಜೋರಾಗಿಯೇ ನಡೆದಿದೆ.  ಈಗಾಗಲೇ ಸದನದಲ್ಲಿ ಆರೋಪ ಪ್ರತ್ಯಾರೋಪಗಳ  ಸುರಿಮಳೆ ಶುರುವಾಗಿದೆ.. ವಾದ ವಿವಾದಗಳನ್ನು ಎಲ್ಲರೂ ಮಂಡಿಸುತ್ತಿದ್ದಾರೆ.. ಅತೃಪ್ತ ಶಾಸಕರನ್ನು ಮನವೊಲಿಸುವಲ್ಲಿ ಸೋತಿರುವ ದೋಸ್ತಿಗಳು ವಿಶ್ವಾಸಮತ ಯಾಚನೆ ಮಾಡಲು ಮುಂದಾಗಿದ್ದಾರೆ. ಇದರ ನಡುವೆ ದೇವೆಗೌಡರು ಮೌನ ವಹಿಸಿರುವುದು ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ,

ಬಹುಮತ ಆಗುವವರೆಗೂ ಕಾದು ನೋಡೋಣ ಎಂದು ದೇವೆಗೌಡರು ಹೇಳಿದ್ದರು.. ಹೀಗಾಗಿ ಈ ನಡೆ ದೋಸ್ತಿಗಳಿಗೂ ಕೂಡ ಅರ್ಥವಾಗಿಲ್ಲ… ಬುಧವಾರ ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ ಜೊತೆ ದೇವೆಗೌಡ ಅವರು ಸುದೀರ್ಘ ಚರ್ಚೆ ನಡೆಸಿ ಕಾನೂನಿನ ಹೋರಾಟದಲ್ಲೆ ಸರ್ಕಾರ ಉಳಿಸಿಕೊಳ್ಳಲು ದೇವೆಗೌಡರು ರಣತಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಬಹುಮತದ ಚರ್ಚೆಯನ್ನು ಎರಡು ಮೂರು ದಿನ ಎಳೆಯುವುದು. ಈ ವೇಳೆ ಸುಪ್ರೀಂಕೋರ್ಟ್ ನೀಡಿದ್ದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ವಿಪ್ ಗೊಂದಲದ ಬಗ್ಗೆ ನಿವಾರಣೆ ಮಾಡಿಕೊಳ್ಳುವುದು. ಒಂದು ವೇಳೆ ವಿಪ್ ಉಲ್ಲಂಘಿಸಿದ್ದಕ್ಕೆ ಶಾಸಕರನ್ನು ಅನರ್ಹತೆ ಮಾಡಬಹುದು ಎಂದು ತೀರ್ಪು ನೀಡಿದರೆ ಅನರ್ಹತೆ ಅಸ್ತ್ರ ಬಳಸಿ ಕೊನೆ ಕ್ಷಣದಲ್ಲಿ ಸರ್ಕಾರವನ್ನು ರಕ್ಷಿಸಬಹುದು ಎನ್ನುವ ಲೆಕ್ಕಾಚಾರವನ್ನು ದೇವೆಗೌಡರು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

Edited By

Manjula M

Reported By

Manjula M

Comments