ಮಾನ ಮರ್ಯಾದೆ ಇದ್ದರೆ ಸಿಎಂ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದ ಬಿಜೆಪಿ ಶಾಸಕ..!!

17 Jul 2019 2:50 PM | Politics
1585 Report

ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ವಿಚಾರವನ್ನು ಸ್ಪೀಕರ್ ನಿರ್ಧಾರಕ್ಕೆ ಸುಪ್ರೀಂ ಕೊರ್ಟ್ ಬಿಟ್ಟಿದೆ... ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜೀನಾಮೆ ಕೊಡಲಿ ಎಂದು ವಿರೋಧ ಪಕ್ಷದವರು ಒತ್ತಾಯ ಮಾಡುತ್ತಿದ್ದಾರೆ..  ನಾಚಿಕೆ ಮಾನ ಮರ್ಯಾದೆ ಇದ್ರೆ ಮೊದಲು ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ..

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್ ಸುಪ್ರೀಂ ಕೋರ್ಟ್ ಸರಿಯಾದ ತೀರ್ಪು ಕೊಟ್ಟಿದೆ.  ಸ್ಪೀಕರ್ ಕಾಲಮಿತಿಯಲ್ಲಿ ರಾಜೀನಾಮೆ ಅಂಗೀಕಾರ ವಿಚಾರ ನಿರ್ಧಾರ ಮಾಡಲಿ ಎಂದು ಕೋರ್ಟ್ ತಿಳಿಸಿದೆ.  ಸ್ಪೀಕರ್ ಇಂದು ಅಥವಾ ನಾಳೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋ ವಿಶ್ವಾಸ ಇದೆ. ಇನ್ನೂ ಅತೃಪ್ತರಿಗೆ ವಿಪ್ ಅನ್ವಯ ಆಗಲ್ಲ ಎಂದು ಕೋರ್ಟ್ ತಿಳಿಸಿದೆ.. ಹಾಗಾಗಿ ಕುಮಾರಸ್ವಾಮಿಗೆ ಅಧಿಕಾರದಲ್ಲಿ ಮುಂದುವರೆಯುವ ಹಕ್ಕು ಇಲ್ಲ, 15 ಶಾಸಕರು ರಾಜೀನಾಮೆ ಕೊಟ್ಟಾಗಲೇ ಕುಮಾರಸ್ವಾಮಿ ರಾಜೀನಾಮೆ ಕೊಡಬೇಕಿತ್ತು, ಈ ಕ್ಷಣವೇ ಕುಮಾರಸ್ವಾಮಿ ರಾಜೀನಾಮೆ ನೀಡಲಿ ಎಂದು ಜಗದೀಶ್ ಶೆಟ್ಟರ್ ಒತ್ತಾಯ ಮಾಡಿದರು. ನಾಚಿಕೆ ಮಾನ ಮರ್ಯಾದೆ ಇದ್ದರೆ ಸಿಎಂ ಕುಮಾರಸ್ವಾಮಿಯವರು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.. ನಾಳೆ ವಿಶ್ವಾಸ ಮತಯಾಚನೆ ಇದೆ.. ಅತೃಪ್ತ ಶಾಸಕರು ಮತ್ತೆ ದೋಸ್ತಿ ಜೊತೆ ಕೈ ಜೋಡಿಸುತ್ತಾರೋ ಅಥವಾ ದೋಸ್ತಿಗೆ ಕೈ ಕೋಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments