ಅತೃಪ್ತರ ಭವಿಷ್ಯ ಸದ್ಯ ಸ್ಪೀಕರ್ ಕೈಯಲ್ಲಿ..!!

17 Jul 2019 12:08 PM | Politics
213 Report

ಜೆಡಿಎಸ್ ಹಾಗೂ ಕಾಂಗ್ರೆಸ್ ದೋಸ್ತಿಗೆ ತಲೆನೋವು ಉಂಟಾಗಿದೆ.  ಜೆಡಿಎಸ್-ಕಾಂಗ್ರೆಸ್ ಶಾಸಕರ ರಾಜೀನಾಮೆ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್ ಇದೀಗ ತನ್ನ ತೀರ್ಪನ್ನು ಪ್ರಕಟಿಸಿದೆ, ರಾಜೀನಾಮೆ ವಿಚಾರದ ಬಗ್ಗೆ ಸ್ಪೀಕರ್ ನಿರ್ಧಾರವೇ ಕೊನೆ ಎಂದಿದ್ದಾರೆ. ಅಧಿವೇಶನಕ್ಕೆ ಬರುವಂತೆ ಒತ್ತಾಯಿಸುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ತೀರ್ಪು ನೀಡಿದೆ.

ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಈ ಮೂಲಕ ಸ್ಪೀಕರ್ ಕೈಯಲ್ಲಿ ಅತೃಪ್ತರ ಭವಿಷ್ಯ ಅಡಗಿದೆ. ನಿನ್ನೆ ರಾಜೀನಾಮೆ ನೀಡಿದ್ದ ಶಾಸಕ ಪರವಾಗಿ ವಕೀಲ ಮುಕುಲ್ ರೋಹ್ಟಗಿ ವಾದವನ್ನು ಮಂಡಿಸಿದ್ದರು. ಸ್ಪೀಕರ್ ಪರವಾಗಿ ಅಭಿಷೇಕ್ ಮನುಸಿಂಘ್ವಿ ಪ್ರತಿವಾದವನ್ನು ಮಂಡಿಸಿದ್ದರು. ಅಲ್ಲದೇ ಸಿಎಂ ಪರವಾಗಿಯೂ ವಕೀಲರು ವಾದಿಸಿದ್ದರು. ಈ ಎಲ್ಲಾ ವಾದ-ವಿವಾದವನ್ನು ಆಲಿಸಿದ್ದ ಸುಪ್ರೀಂ ಕೋರ್ಟ್ ಇಂದಿಗೆ ತನ್ನ ತೀರ್ಪನ್ನು ಕಾಯ್ದಿರಿಸಿ ವಿಚಾರಣೆಯನ್ನು ಮುಂದೂಡಿತ್ತು. ಇದೀಗ ಸುಪ್ರೀಂ ಕೋರ್ಟ್ ಎಲ್ಲಾ ಜವಬ್ದಾರಿಯನ್ನು ಸ್ಪೀಕರ್ ಗೆ ವಹಿಸಿದೆ. ಅದಕ್ಕೆ ಯಾವುದೇ ಕಾಲಮಿತಿಯಿಲ್ಲ. ಆದರೇ ಅತೃಪ್ತರು ವಿಧಾನಮಂಡಲದ ಅಧಿವೇಶನದಲ್ಲಿ ಭಾಗವಹಿಸಲು ಒತ್ತಾಯ ಮಾಡುವಂತಿಲ್ಲ ಎಂದು ಎರಡೇ ಎರಡು ಸಾಲಿನಲ್ಲಿ ತನ್ನ ತೀರ್ಪನ್ನು ಪ್ರಕಟ ಮಾಡಿದೆ.ಸದ್ಯ ಇದೀಗ ಅತೃಪ್ತ ಶಾಸಕರ ಭವಿಷ್ಯ ಸ್ಪೀಕರ್ ಕೈಯಲ್ಲಿದೆ.

Edited By

Manjula M

Reported By

Manjula M

Comments