ದೋಸ್ತಿ ಸರ್ಕಾರದ ಮತ್ತೊಂದು ಪ್ರಭಾವಿ ವಿಕೆಟ್ ಪತನ..? ! ಬಿಜೆಪಿ ಸೇರುತ್ತಾರಾ ಜೆಡಿಎಸ್ ನ ಸಚಿವ..?!

15 Jul 2019 1:37 PM | Politics
4629 Report

ಮೈತ್ರಿ ಸರ್ಕಾರಕ್ಕೆ ಸದ್ಯ ಕಂಟಕ ಶುರುವಾದ ಆಗಿದೆ. ಆಷಾಡದ ಎಫೆಕ್ಟ್ ದೋಸ್ತಿಗಳ ಮೇಲೆ ಬಿದ್ದಿದೆ ಎನಿಸುತ್ತಿದೆ.. ಅತೃಪ್ತ ಶಾಸಕರು ರಾಜೀನಾಮೆ ಕೊಡಲು ನಾ ಮುಂದು, ತಾ ಮುಂದು ಎಂಬಂತೆ  ಹೋಗುತ್ತಿದ್ದಾರೆ. ಈಗಾಗಲೇ 14 ಮಂದಿ ರಾಜನಾಮೇ ನೀಡಿದ್ದಾರೆ. ಮತ್ತೊಂದು ದೋಸ್ತಿ ಸರ್ಕಾರದ ವಿಕೇಟ್ ಪತನವಾಗುತ್ತದೆಯೇ ಎಂಬ ಮಾತು ರಾಜಕೀಯದಲ್ಲಿ ಕೇಳಿ ಬರುತ್ತಿದೆ.

ಮೈತ್ರಿ ಸರ್ಕಾರದ ಸಚಿವ ಜಿ.ಟಿ.ದೇವೇಗೌಡರು ಬಿಜೆಪಿ ಸೇರಲಿದ್ದಾರೆ ಎಂಬ ಪೋಸ್ಟ್ ವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ  ಹರಿದಾಡುತ್ತಿದೆ. ಬಿಜೆಪಿ ಕಾರ್ಯಕರ್ತರು ಫೇಸ್ ಬುಕ್ ನಲ್ಲಿ, ಬಿಜೆಪಿ ಸೇರುತ್ತಿರೋ ಜಿ.ಟಿ.ದೇವೇಗೌಡರಿಗೆ ಸ್ವಾಗತ. ಪ್ರಧಾನಿ ಮೋದಿ ಅವರ ಕಾರ್ಯವೈಖರ್ಯವನ್ನು ಮೆಚ್ಚಿ ಜಿ.ಟಿ.ಡಿ. ಬಿಜೆಪಿಗೆ. ಅಪ್ಪ-ಮಕ್ಕಳ ಪಕ್ಷ ತೊರೆದು ಬಿಜೆಪಿಗೆ ಬರ್ತಿರೋ ಜಿಟಿಡಿಗೆ ಸ್ವಾಗತ. ನಿಮ್ಮ ಪುತ್ರನಿಗೆ ಟಿಕೆಟ್ ಕೊಡದ ಜೆಡಿಎಸ್ ಇದ್ದೂ ಸತ್ತಂತೆ' ಎಂಬ ಪೋಸ್ಟ್ ನ್ನು ಹರಿಬಿಟ್ಟಿದ್ದಾರೆ. ರಾಜಕೀಯ ವಲಯದಲ್ಲಿ ಯಾರು ಕೂಡ ಊಹಿಸಲಾಗದ ರೀತಿಯಲ್ಲಿ ಸಾಕಷ್ಟು ಬೆಳವಣಿಗೆಗಳು ಕಂಡು ಬರುತ್ತಿವೆ.  ದೋಸ್ತಿಯ ಸಾಕಷ್ಟು ನಾಯಕರು ಈಗಾಗಲೇ ಬಿಜೆಪಿಯತ್ತ ಮುಖ ಮಾಡಿದ್ದಾರೆ.. ಇತ್ತಿಚಿನ ದಿನಗಳಲ್ಲಿ ಮೋದಿಯವರ ಕಾರ್ಯಗಳನ್ನು ಶ್ಲಾಘಿಸುತಿದ್ದ ಜಿಟಿಡಿ ಬಿಜೆಪಿ ಹೋದರೂ ಹೋಗಬಹುದು. ಮುಂಬರುವ ದಿನಗಳಲ್ಲಿ ಜಿ ಟಿ ದೇವೆಗೌಡರು ಕಮಲ ಅರಳಿಸಲು ಮುಂದಾಗುತ್ತಾರ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments