ಸಚಿವ ಡಿಕೆ ಶಿವಕುಮಾರ್ ಸಿಡಿಸಿದ್ರಾ 'ಹೊಸ ಬಾಂಬ್'..!!

06 Jul 2019 3:29 PM | Politics
541 Report

ಈಗಾಗಲೇ ಮೈತ್ರಿ ಸರ್ಕಾರದ ಬುಡ ಸಡಿಲಗೊಂಡಂತೆ ಆಗಿದೆ. ಇಂದು ಸಾಕಷ್ಟು ಅತೃಪ್ತ ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ವದಂತಿಗಳು ಕೇಳಿ ಬರುತ್ತಿವೆ.  ಇದೇ ಬೆನ್ನಲೆ ಸಚಿವ ಡಿಕೆ ಶಿವಕುಮಾರ್ ಹೊಸಬಾಂಬ್ ಹೊಸಬಾಂಬ್ ಸಿಡಿಸಿದ್ದಾರೆ.  ದೋಸ್ತಿ ಸರ್ಕಾರದ ಶಾಸಕರನ್ನು ಸಚಿವರನ್ನು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಬಿಜೆಪಿ ಆಪರೇಷನ್ ಕಮಲ ಮಾಡಲು ವಸೂಲಿಗೆ ಇಳಿದಿದೆ ಎಂದು ಸಚಿವ ಡಿಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ರಾಮನಗರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಮಾಧ್ಯಮಗಳ ಮೂಲಕ ರಾಜ್ಯ ರಾಜಕೀಯ ವಿದ್ಯಾಮಾನಗಳ ದಿಢೀರ್ ಬೆಳವಣಿಗೆಯನ್ನು ಗಮನಿಸಿದ್ದೇನೆ. ಹೀಗಾಗಿ ನನ್ನ ಜಿಲ್ಲೆಯ ಕಾರ್ಯಕ್ರಮವನ್ನು ರದ್ದುಗೊಳಿಸಿ ಬೆಂಗಳೂರಿಗೆ ತೆರಳುತ್ತಿರುವುದಾಗಿ ತಿಳಿಸಿದರು. ಸದ್ಯ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ರಾಜಕೀಯ ವಲಯದಲ್ಲಿ ಅತೃಪ್ತ ಶಾಸಕರು ರಾಜೀನಾಮೆ ಹೆಚ್ಚಾಗುತ್ತಿದೆ.. ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂಬುದು ದೋಸ್ತಿಗಳ ಮಾತಾಗಿದೆ. . ದಿಢೀರ್ ರಾಜಕೀಯ ವಿದ್ಯಾಮಾನ ಕುರಿತು ಚರ್ಚೆ ನಡೆಸಲು ಇಂದು ಸಂಜೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಶಾಸಕರು, ಸಚಿವರ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಎಲ್ಲಾ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದರು. ದೋಸ್ತಿ ಸರ್ಕಾರದ ಪತನಕ್ಕೆ ದಿನ ಗಣನೆ ಪ್ರಾರಂಭವಾಗಿದೆ.. ಒಟ್ಟಿನಲ್ಲಿ ರಾಜಕೀಯದಲ್ಲಿ ಯಾವೆಲ್ಲ ಬದಲಾವಣೆಗಳು ಆಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments