ಸಿಎಂ ಕುಮಾರಸ್ವಾಮಿ ಆಯ್ತು..!! ಇದೀಗ ಜೆಡಿಎಸ್’ನ ಮತ್ತೊಬ್ಬ ಸಚಿವರಿಂದ ಜನತಾದರ್ಶನ..!!!

05 Jul 2019 9:03 AM | Politics
2199 Report

ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಲೆ ಇರುತ್ತವೆ.. ವಿಧಾನಸಭಾ ಚುನಾವಣೆಗೂ ಮುನ್ನವೇ ಜೆಡಿಎಸ್ ನ ಪ್ರಣಾಳಿಕೆಯಲ್ಲಿ  ಪ್ರತಿನಿತ್ಯವು ಜನತಾ ದರ್ಶನ ಮಾಡುವುದಾಗಿ ಕುಮಾರಸ್ವಾಮಿಯವರು ತಿಳಿಸಿದರು.. ಅದರಂತೆ ರಾಜ್ಯದ ಮುಖ್ಯಮಂತ್ರಿಯಾದ ಮೇಲೆ ಪ್ರತಿನಿತ್ಯವು ಒಂದಷ್ಟು ದಿನ ಜನತಾ ದರ್ಶನ ಮಾಡಿದರು.. ನಂತರ ಸಮಯ ಸಾಲದೆ ವಾರಕ್ಕೆ ಒಂದು ಬಾರಿ, ನಂತರ ತಿಂಗಳಿಗೆ ಒಂದು ಬಾರಿ ಎನ್ನುವ ರೀತಿಯಲ್ಲಿ ಜನತಾ ದರ್ಶನ ಮಾಡಿ ಅವರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದಾರೆ. ಇದೀಗ ಮತ್ತೊಬ್ಬ ಜೆಡಿಎಸ್ ಸಚಿವ ಕುಮಾರಸ್ವಾಮಿಯವರ ಸಾಲಿನಲ್ಲಿಯೇ ನಡೆಯುತ್ತಿದ್ದಾರೆ.

ಇನ್ನು ಮುಂದೆ ತಾಲೂಕು ಮಟ್ಟದಲ್ಲೂ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸುವ ಮೂಲಕ ನಾಗರಿಕರ ಸಮಸ್ಯೆಗೆ ಸ್ಪಂದಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಜಿಟಿ ದೇವೆಗೌಡರು, ನಾಗರಿಕರು ತಿಂಗಳುಗಟ್ಟಲೆ ಸರ್ಕಾರಿ ಕಚೇರಿಗಳಿಗೆ ಅಲೆದರೂ ಅವರ ಕೆಲಸವಾಗಿರುವುದಿಲ್ಲ. ಇದನ್ನು ಅರಿತು ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುವುದು. ಅಷ್ಟೆ ಅಲ್ಲದೇ ಶೀಘ್ರದಲ್ಲೇ ಪ್ರತಿ ತಾಲೂಕಿನಲ್ಲೂ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.ಅಧಿಕಾರಿಗಳು ಜನರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದನ್ನು ಬಿಟ್ಟು ಅವರ ಕಷ್ಟವನ್ನು ಅರಿತುಕೊಂಡು, ಸಮಸ್ಯೆ ಬಗೆಹರಿಸಬೇಕು ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ಒಂದಷ್ಟು ಶಾಸಕರು, ಸಚಿವರು ಜನರ ಕಷ್ಟಗಳನ್ನು ಅರಿತು ಅವರ ಸಮಸ್ಯೆಗಳಿಗೆ ಪರಿಹಾರ ಕೊಡಲು ಮುಂದಾಗಿದ್ದಾರೆ.

Edited By

Manjula M

Reported By

Manjula M

Comments