ಸಂಸದೆ ಶೋಭಾ ಕರಂದ್ಲಾಜೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಕಿದ ಚಾಲೆಂಜ್ ಏನ್ ಗೊತ್ತಾ..!

03 Jul 2019 3:46 PM | Politics
280 Report

ರಾಜ್ಯ ರಾಜಕೀಯದಲ್ಲಿ ಆರೋಪಗಳು ಪ್ರತ್ಯಾರೋಪಗಳು ಕೇಳಿ ಬರುತ್ತಿವೆ.. ಒಬ್ಬರ ಮೇಲೋಬ್ಬರು ಸವಾಲುಗಳನ್ನು ಹಾಕುತ್ತಲೇ  ಇರುತ್ತಾರೆ.. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಗೆ ಸವಾಲನ್ನು ಹಾಕಿದ್ದಾರೆ.  ಕೇವಲ 105 ಶಾಸಕರಿಂದ ಸರ್ಕಾರ ರಚಿಸಬಹುದು ಎನ್ನುವ ವಿಶ್ವಾಸ ನಿಮಗಿದ್ದರೆ ರಾಜ್ಯಪಾಲರ ಮುಂದೆ ಹಕ್ಕು ಮಂಡಿಸಿ, ಅವರು ಒಪ್ಪಿದರೆ ನಾವಾಗಿಯೇ ಸರ್ಕಾರದಿಂದ ಹೊರಹೋಗುತ್ತೇವೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕದಲ್ಲಿ 113 ಶಾಸಕರ ಬೆಂಬಲವಿದ್ದರೆ ಯಾರೂ ಬೇಕಾದರೂ ಸರ್ಕಾರ ರಚನೆ ಮಾಡಬಹುದು. ಒಂದು ವೇಳೆ ರಾಜ್ಯಪಾಲರು ನಿಮ್ಮ ಹಕ್ಕು ಮಂಡನೆಯನ್ನು ಒಪ್ಪಿಕೊಂಡರೆ ನಾವಾಗಿಯೇ ಸರ್ಕಾರದಿಂದ ಹೊರಹೋಗುತ್ತೇವೆ. 105 ಕ್ಕಿಂತ 113 ದೊಡ್ಡದು ಎಂಬುದು ನನ್ನ ಅನಿಸಿಕೆ ಎಂದು ಬಿಜೆಪಿ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಅಷ್ಟೆ ಅಲ್ಲದೆ ಶೋಭಾ ಕರಂದ್ಲಾಜೆ ಅವರು, 78 ಕ್ಕಿಂತ 105 ದೊಡ್ಡದು, ರಾಜ್ಯದ ಜನತೆಯು ಬಿಜೆಪಿ ಪರ ಒಲವನ್ನು ತೋರಿಸಿ ತೀರ್ಪು ಕೊಟ್ಟರೂ ಕೂಡ ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ದೋಸ್ತಿ ಸರ್ಕಾರವನ್ನು ರಚನೆ ಮಾಡಿಕೊಂಡಿದೆ ಎಂದರು. ಹೀಗೆ ಒಬ್ಬರಿಗೆ ಒಬ್ಬರು ಟಾಂಗ್ ಕೊಡುತ್ತಲೇ ಇರುತ್ತಾರೆ… ಸದ್ಯ ಸರ್ಕಾರ ಮುಂದೆ ಯಾವ ರೀರಿಯ ತಿರುವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.  

Edited By

Manjula M

Reported By

Manjula M

Comments