ಮುಖ್ಯಮಂತ್ರಿ ಆಗುವ ಕನಸು ಕಂಡಿದ್ದ ಬಿಎಸ್ ವೈ ಗೆ ಬಿಗ್ ಶಾಕ್..!!

03 Jul 2019 2:36 PM | Politics
3181 Report

ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಸಾಕಷ್ಟು ಜನರು ಪ್ರಯತ್ನ ಮಾಡುತ್ತಿರುತ್ತಾರೆ.. ಅದರಲ್ಲಿ ಮುಂಚೂಣಿಯಲ್ಲಿರುವವರು ಬಿಎಸ್ ಯಡಿಯೂರಪ್ಪನವರು.. ಮತ್ತೊಮ್ಮೆ ಮುಖ್ಯಮಂತ್ರಿ ಆಗಲು ಪ್ರಯತ್ನ ಮಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ನಿಲುವಿಗೆ ಸಂಘ ಪರಿವಾರ ವಿರೋಧವನ್ನು ವ್ಯಕ್ತಪಡಿಸಿದೆ ಎಂದು ಹೇಳಲಾಗುತ್ತಿದೆ. ಆಪರೇಷನ್ ಕಮಲವನ್ನು ಮಾಡಲು ಸಾಕಷ್ಟು ಬಿಜೆಪಿ ಶಾಸಕರು ಪ್ರಯತ್ನವನ್ನು ಮಾಡುತ್ತಿದ್ದರೂ ಕೂಡ ಯಾವುದೂ ಸರಿ ಹೋಗುತ್ತಿಲ್ಲ ಎಂಬುದು ರಾಜಕೀಯ ವಲಯದ ಮಾತಾಗಿದೆ.

ಆಪರೇಷನ್ ಕಮಲ ನಡೆಸಲು ಆರ್ ಎಸ್‌ಎಸ್ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದು, ಆಪರೇಷನ್ ಕಮಲದಿಂದ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಬಹುದೊಡ್ಡ ಹೊಡೆತ ಬೀಳಲಿದೆ ಎನ್ನಲಾಗುತ್ತಿದೆ.. ಹಾಗಾಗಿ ಮೈತ್ರಿ ನಾಯಕರೇ ಕಚ್ಚಾಡಿಕೊಂಡು ಸರ್ಕಾರ ಬಿದ್ದರೆ ಮಾತ್ರ ಸರ್ಕಾರ ರಚನೆ ಮಾಡುವಂತೆ ಆರ್ ಎಸ್‌ಎಸ್ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ ಎನ್ನಲಾಗಿದೆ. ದೋಸ್ತಿ ಸರ್ಕಾರದಲ್ಲಿ ಯಾವುದು ಮೊದಲಿನಂತೇ ಕಾಣುತ್ತಿಲ್ಲ…ಒಳಗೊಳಗೆ ಸಾಕಷ್ಟು ಕಿತ್ತಾಟಗಳು ನಡೆಯುತ್ತಿವೆ.. ಸರ್ಕಾರ ರಚನೆಗೆ ಇನ್ನೂ 15 ಶಾಸಕರು ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡಿದ ತಕ್ಷಣ ಸ್ಪೀಕರ್ ಅಂಗೀಕಾರ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ…. ಒಟ್ಟಿನಲ್ಲಿ ದೋಸ್ತಿ ಸರ್ಕಾರ ತಾನಾಗಿಯೇ ಬೀಳುತ್ತದೆಯೋ ಅಥವಾ ಆಪರೇಷನ್ ಕಮಲ ಮಾಡಿ ಸರ್ಕಾರ ಬೀಳಿಸುತ್ತಾರೋ ಗೊತ್ತಿಲ್ಲ…ಸದ್ಯ ಯಡಿಯೂರಪ್ಪನವರ ಕನಸಿಗೆ ಬ್ರೇಕ್ ಹಾಕಿದ್ದಾರೆ.

Edited By

Manjula M

Reported By

Manjula M

Comments