ಕಾಂಗ್ರೆಸ್ ಗೆ ಬಿಗ್‌ ಶಾಕ್‌,..!! ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್‌ನ ಪ್ರಭಾವಿ ಶಾಸಕ..!!!

01 Jul 2019 10:29 AM | Politics
879 Report

ರಾಜ್ಯ ರಾಜಕೀಯದಲ್ಲಿ ಇತ್ತಿಚಿಗಂತೂ ಸಾಕಷ್ಟು ಬದಲಾವಣೆಗಳು ಆಗಿವೆ.ಅದರಲ್ಲೂ ಲೋಕಸಭಾ ಚುನಾವಣೆಯ ನಂತರವಂತೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ರಾಜ್ಯ ರಾಜಕೀಯದಲ್ಲಿ ಮಹತ್ತರವಾದ ಬದಲಾವಣೆಗಳು ಕಂಡು ಬಂದಿವೆ..ಅದರಲ್ಲು ಅತೃಪ್ತ ಶಾಸಕರು ಪಕ್ಷ ಬಿಟ್ಟು ಬೇರೆ ಬೇರೆ ಪಕ್ಷಕ್ಕೆ ಹಾರುತ್ತಿದ್ದಾರೆ.. ಇದೀಗ ಮತ್ತೊಬ್ಬ ಶಾಸಕ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.ಹೊಸಪೇಟೆ ವಿಧಾಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಸ್ಥಾನಕ್ಕೆ ಶಾಸಕ ಆನಂದ್‌ ಸಿಂಗ್‌ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಸ್ಪೀಕರ್‌ ರಮೇಶ್‌ ಕುಮಾರ್‌ ಅವರನ್ನು ಭೇಟಿ ಮಾಡಿರುವ ಆನಂದ್‌ ಸಿಂಗ್‌ ಅವರು ಈಗಾಲೇ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.. ಅವರು ಕೆಲ ತಿಂಗಳುಗಳ ಹಿಂದೆ ನಡೆದ ಕಂಪ್ಲಿ ಶಾಸಕ ಗಣೇಶ್, ಆನಂದ್ ಸಿಂಗ್ ಪ್ರಕರಣವು ರಾಮನಗರದ ಸೆಷನ್ಸ್ ನ್ಯಾಯಾಲಯದಲ್ಲಿದೆ. ಕೆಲವು ದಿನಗಳ ಹಿಂದೆ ಅವರು ಜಿಂದಾಲ್‌ಗೆ ಭೂಮಿ ನೀಡಿದ್ದರ ಬಗ್ಗೆ ಸರಕಾರದ ಧೋರಣೆ ವಿರುದ್ದ ಸಿಡಿದೆದಿದ್ದರು, ಹೀಗಾಗಿ ರಾಜ್ಯ ಸರಕಾರದ ನಡವಳಿಕೆ ವಿರುದ್ದ ಆನಂದ್ ಸಿಂಗ್ ಅಸಮಾನಧಾನ ಗೊಂಡಿದ್ದರು ಎಂದು ಹೇಳಲಾಗುತ್ತಿದೆ.. ಶಾಸಕ ಸ್ಥಾನಕ್ಕೆ ರಾಜೀನಾಮೆ ಕಾರಣ ನೀಡಿರುವ ಬಗ್ಗೆ ಸ್ವತಹ ಆನಂದ್‌ ಸಿಂಗ್‌ ಅವರೇ ಹೇಳಲಾಗಿದೆ.. ಒಟ್ಟಿನಲ್ಲಿ ಒಬ್ಬೊಬ್ಬರೆ ಈ ರೀತಿಯಾಗಿ ರಾಜೀನಾಮೆ ನೀಡುತ್ತಿರುವುದು ದೋಸ್ತಿ ಸರ್ಕಾರದ ಮೇಲೆ ಪರಿಣಾಮ ಬೀರುವುದು ಮಾತ್ರ ಖಂಡಿತ.

Edited By

Manjula M

Reported By

Manjula M

Comments