ಬಸ್ ಹಿಂದೆ ಓಡಿ ಬಂದು ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಿದ ಅಜ್ಜಿ..!!

21 Jun 2019 1:18 PM | Politics
221 Report

ಸಿಎಂ ಕುಮಾರಸ್ವಾಮಿಯವರು ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ..ಗ್ರಾಮ ವಾಸ್ತವ್ಯದಲ್ಲಿ ಸಿಎಂ ಕುಮಾರಸ್ವಾಮಿಯವರು ಅಲ್ಲಿರುವ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರವನ್ನು ಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವರು ಅದನ್ನು ಹ್ಯಾಸ್ಯಾಸ್ಪದವಾಗಿ ಟೀಕಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಇಂದಿನಿಂದ ಯಾದಗಿರಿ ಜಿಲ್ಲೆಯ ಚಂಡರಕಿಯಲ್ಲಿ ಗ್ರಾಮವಾಸ್ತವ್ಯವನ್ನು ಕೈಗೊಂಡಿದ್ದಾರೆ.

ಅದೇ ಕಾರಣಕ್ಕಾಗಿ ಸಿಎಂ ಅವರು ಇಂದು ಬಸ್ ನಲ್ಲಿ ಚಂಡರಕಿ ಗ್ರಾಮದತ್ತ ಪ್ರಯಾಣವನ್ನು ಬೆಳೆಸಿದ್ದರು.ಮುಖ್ಯಮಂತ್ರಿಗಳು ಬಸ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಅಜ್ಜಿಯೊಬ್ಬರು ಹಿಂದಿನಿಂದ ಓಡಿಕೊಂಡು ಬಂದಿದ್ದಾರೆ. ಇದನ್ನು ಗಮನಿಸಿದ ಸಿಎಂ ಅವರು ಬಸ್ ನಿಧಾನಗೊಳಿಸುವಂತೆ ಚಾಲಕರಲ್ಲಿ ಹೇಳಿ ಅಜ್ಜಿಯ ಮನವಿಯನ್ನು ಕೇಳಿದ್ದಾರೆ... ಬಸ್ ಬಳಿ ಓಡಿ ಬಂದ ಅಜ್ಜಿ, ನಮಸ್ಕಾರ ಸಿಎಂ ಸಾಹೇಬರೇ.. ನೋಡಿ ನಮಗೆ ಎರಡೂವರೆ ಸಾವಿರ ಪಗಾರ ಹೆಚ್ಚಿಗೆ ಆಗಿಲ್ಲ. ಜಾಸ್ತಿ ಮಾಡಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಸಿಎಂ ಅವರು ಆಯ್ತು ಜಾಸ್ತಿ ಮಾಡಿಕೊಡುತ್ತೇನೆ ಎಂದು ಭರವಸೆಯನ್ನು ನೀಡಿದ್ದಾರೆ. ಅಷ್ಟೆ ಅಲ್ಲದೆ ಅಜ್ಜಿ 600 ಮಕ್ಕಳಿಗೆ ಅಡುಗೆ ಮಾಡಬೇಕು. ದಯಮಾಡಿ ಜಾಸ್ತಿ ಮಾಡಿಸಿಕೊಡಿ ಎಂದು ಹೇಳಿದ್ದಕ್ಕೆ, ಇಲ್ಲಿ ಅಡುಗೆ ಕೆಲಸ ಮಾಡುತೀರಾ. ಸರಿ ಮಾಡಿಸಿಕೊಡುತ್ತೇನೆ ಎಂದು ಸಿಎಂ ಅವರು ಅಜ್ಜಿಗೆ ಭರವಸೆ ಮಾತುಗಳನ್ನು ಆಡಿದ್ದಾರೆ.. ಒಟ್ಟಿನಲ್ಲಿ ಜನರ ಸಮಸ್ಯೆಗೆ ಕುಮಾರಸ್ವಾಮಿಯವರು ಸ್ಪಂದಿಸುತ್ತಿರುವುದು ಅಭಿಮಾನಿಗಳಿಗೆ ಖುಷಿಯನ್ನು ತಂದಿದೆ..

Edited By

Manjula M

Reported By

Manjula M

Comments