ದೋಸ್ತಿ ಸರ್ಕಾರ ಪತನದ ಬಗ್ಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ..!!

21 Jun 2019 11:44 AM | Politics
217 Report

ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ದಿನಗಳು ಕೂಡ ರಾಜ್ಯ ರಾಜಕೀಯದಲ್ಲಿ ಯಾವುದು ಸರಿ ಇಲ್ಲವಂತೆ ಕಾಣುತ್ತಿದೆ.. ಫಲಿತಾಂಶ ಬಂದ ದಿನದಿಂದಲೂ ಕೂಡ ಸದ್ಯ ಇರುವ ದೋಸ್ತಿ ಸರ್ಕಾರ ಪತನವಾಗುತ್ತದೆ ಎಂದು ವಿರೋಧ ಪಕ್ಷಗಳು ಹೇಳುತ್ತಲೇ ಇವೆ.. ಇತ್ತಿಚಿಗಷ್ಟೆ ರೇವಣ್ಣ ಕೂಡ ಸರ್ಕಾರ ಪತನದ ಬಗ್ಗೆ ಸುಳಿವು ನೀಡಿದ್ದರು ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಕುಮಾರಸ್ವಾಮಿಯವರೇ ಈ ಬಗ್ಗೆ ಮಾತನಾಡಿದ್ದಾರೆ.,ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಕುಮಾರಸ್ವಾಮಿಯವರು, ರಾಜ್ಯದಲ್ಲಿ ದೋಸ್ತಿ ಸರ್ಕಾರ ಸುಭದ್ರವಾಗಿದೆ. ಯಾವುದೇ ರೀತಿಯ ಆತಂಕವಿಲ್ಲ. ದೇವೇಗೌಡರ ಹೇಳಿಕೆಯನ್ನು ಬೇರೆ ರೀತಿ ಬಿಂಬಿಸಲಾಗುತ್ತಿದೆ. ಸ್ಥಳೀಯ ಸಂಸ್ಥೆ ಚುನಾವಣೆಗೆ ರೆಡಿಯಾಗಿ ಎಂದಷ್ಟೇ ದೇವೇಗೌಡರು ತಿಳಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಬಳಿ ಇದ್ದ ಒಂದು ಮಂತ್ರಿ ಸ್ಥಾನವನ್ನು ಕೂಡ ಕಾಂಗ್ರೆಸ್‌ನವರಿಗೆ ಬಿಟ್ಟುಕೊಟ್ಟಿದ್ದೀವಿ. ಆದರು ಕೂಡ ಎಲ್ಲವೂ ಶಮನವಾಗಿಲ್ಲ. ಈ ಸರಕಾರ ಎಷ್ಟು ದಿವಸ ಇರುತ್ತದೋ ನನಗೆ ಗೊತ್ತಿಲ್ಲ . ಇದೀಗ ಎಲ್ಲವನ್ನು ಸಹಿಸಿಕೊಂಡು ಹೋಗುತ್ತಿದ್ದೇನೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಹೇಳಿಕೆ ನೀಡಿದ್ದರು.ಈ ಹಿನ್ನಲೆಯಲ್ಲಿಯೇ ಕುಮಾರಸ್ವಾಮಿಯವರು ಸರ್ಕಾರ ಸುಭದ್ರವಾಗಿದೆ ಎಂದು ಸ್ಪಷ್ಟ ಪಡಿಸಿದರು

Edited By

Manjula M

Reported By

Manjula M

Comments