ಹಾವೇರಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಕಾಣೆಯಾಗಿದ್ದಾರೆ..!!

20 Jun 2019 3:57 PM | Politics
367 Report

ರಾಜಕಾರಣಿಗಳು ಗೆಲ್ಲುವವರೆಗೆ ಮಾತ್ರ… ಗೆದ್ದ ಮೇಲೆ ಯಾರ ಸಮಸ್ಯೆಗಳನ್ನು ಕೂಡ ಆಲಿಸುವುದಿಲ್ಲ ಎಂಬ ಮಾತು ಹೊಸದೇನಲ್ಲ.. ಗೆಲ್ಲುವವರೆಗೂ ಮನೆ ಬಾಗಿಲಿಗೆ ಬಂದು ಕೈ ಕಾಲು ಹಿಡಿದುಕೊಳ್ಳುತ್ತಾರೆ.. ಗೆದ್ದ ಮೇಲೆ ಕೈ ಕೊಟ್ಟು ಎಲ್ಲೋ ಒಂದು ಕಡೆ ಸೇರಿಕೊಂಡು ಬಿಡುತ್ತಾರೆ. ಇದೀಗ ಹಾವೇರಿ ಜಿಲ್ಲಾ ಉಸ್ತುವಾರಿ ಕೂಡ ಮಾಡಿರೋದು ಅದನ್ನೆ.. ಹಾವೇರಿ  ಉಸ್ತುವಾರಿ ಸಚಿವರಾದ ಜಮೀರ್ ಅಹಮದ್ ಖಾನ್ ಕೂಡ ಅದೇ ಕೆಲಸ ಮಾಡಿದ್ದಾರೆ. ಅದಕ್ಕೆ ಹಾವೇರಿ ಜನ ಏನ್ ಮಾಡಿದ್ದಾರೆ ಗೊತ್ತಾ..?

ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ಮತ್ತು ನಾಗರಿಕ ಸಚಿವರಾದ ಜಮೀರ್ ಅಹ್ಮದ್ ಖಾನ್ ಕಾಣೆಯಾಗಿದ್ದಾರೆ ಎಂದು ಹಾವೇರಿ ಜಿಲ್ಲೆಯ ರೈತರು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದು ಇದೀಗ ಅದು ಸಖತ್ ವೈರಲ್ ಆಗುತ್ತಿದೆ.ದೋಸ್ತಿ ಸರ್ಕಾರದಲ್ಲಿ ಜಮೀರ್ ಅಹ್ಮದ್ ಖಾನ್ ಅವರನ್ನು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಆದರೆ ತಿಂಗಳಿಗೆ ಒಂದು ಸಾರಿಯಾದರೂ ಕೂಡ ಸಚಿವರು ಜಿಲ್ಲೆಗೆ ಬಂದಿಲ್ಲ ಎಂದು ಆಕ್ರೋಶಗೊಂಡ ರೈತರು ಜಮೀರ್ ಅಹ್ಮದ್ ಕಾಣೆಯಾಗಿದ್ದಾರೆ ಎಂದು ಫೇಸ್‍ಬುಕ್‍ನಲ್ಲಿ ಜನತೆ ಫೋಸ್ಟ್‌ಗಳನ್ನು ಹಾಕುತ್ತಿದ್ದಾರೆ.ಫೇಸ್‍ಬುಕ್‍ನಲ್ಲಿ ಕಾಣೆಯಾದವರ ಪ್ರಕಟಣೆ, ಹೆಸರು - ಜಮೀರ್ ಅಹ್ಮದ್, ಬಣ್ಣ-ಗೋಧಿ ಬಣ್ಣ ಸಾಧಾರಣ ಮೈಕಟ್ಟು. ಎತ್ತರ-5 ಅಡಿ ಎಂದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಬ್ಯಾಡಗಿ ರೈತರಿಂದ ಜಮೀರ್ ಅಹ್ಮದ್ ವಿರುದ್ಧ ಫೇಸ್‍ಬುಕ್‍ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಇಷ್ಟಾದರೂ ಕೂಡ ಸಚಿವರು ಹಾವೇರಿ ಜಿಲ್ಲೆಗೆ ಭೇಟಿ ಕೊಡುತ್ತಾರ ಎಂಬುದನ್ನು ಕಾದುನೋಡಬೇಕಾಗಿದೆ.. ಒಟ್ಟಿನಲ್ಲಿ ಮತ ಹಾಕಿ ಗೆಲ್ಲಿಸೋದಕ್ಕೆ ಜನರು ಬೇಕು.. ಆದರೆ ಅವರ ಸಮಸ್ಯೆಗಳು ಮಾತ್ರ ಯಾರಿಗೂ ಬೇಡ ಎನ್ನುವಂತಾಗಿದೆ ರಾಜಕಾರಣಿಗಳ ಬದುಕು.   

Edited By

Manjula M

Reported By

Manjula M

Comments